
ಪ್ರಜಾವಾಣಿ ವಾರ್ತೆನವದೆಹಲಿ (ಪಿಟಿಐ): ಹರಿಯಾಣದ ದಲಿತ ಕುಟುಂಬವೊಂದರ ತಂದೆ ಮತ್ತು ಆತನ ವಿಕಲಾಂಗ ಮಗಳನ್ನು ಜೀವಂತ ದಹಿಸಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯ 15 ಜನರಿಗೆ ಶಿಕ್ಷೆ ವಿಧಿಸಿದೆ. ಇಲ್ಲಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಕಾಮಿನಿ ಲೌ ಅವರು ಶನಿವಾರ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ಪ್ರಕಟಿಸಿದರು.
ಜಾತಿ ವೈಷಮ್ಯದ ಹಿನ್ನೆಲೆಯಲ್ಲಿ ಕಳೆದ ವರ್ಷ ಹರಿಯಾಣದ ಮಿರ್ಚಾಪುರ ಗ್ರಾಮದಲ್ಲಿ ಜಾಟ್ ಜನಾಂಗಕ್ಕೆ ಸೇರಿದ ಗುಂಪು ದಲಿತ ಕುಟುಂಬದ ಮೇಲೆ ಈ ಅಮಾನುಷ ಹಲ್ಲೆ ನಡೆಸಿತ್ತು. 70 ವರ್ಷದ ವೃದ್ಧ ಮತ್ತು ಆತನ ಅಂಗವಿಕಲ ಮಗಳನ್ನು ಜೀವಂತವಾಗಿ ದಹಿಸಲಾಗಿತ್ತು. 97 ಜನರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.