ADVERTISEMENT

ದಶಕಗಳ ಅನುಭವಕ್ಕೆ ಸಂದ ಜಯ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 19:59 IST
Last Updated 20 ಡಿಸೆಂಬರ್ 2012, 19:59 IST
ವೀರಭದ್ರಸಿಂಗ್
ವೀರಭದ್ರಸಿಂಗ್   

ಶಿಮ್ಲಾ (ಪಿಟಿಐ): ಆರನೇ ಬಾರಿಗೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಲು ಸಿದ್ಧತೆ ನಡೆಸುತ್ತಿರುವ 78ರ ಹರೆಯದ ವೀರಭದ್ರಸಿಂಗ್ ಅವರದ್ದು ಐದು ದಶಕಗಳ ರಾಜಕೀಯ ಬದುಕು.

ಇಷ್ಟು ವರ್ಷಗಳಲ್ಲಿ ದೊಡ್ಡ ದೊಡ್ಡ ರಾಜಕೀಯ `ಇನ್ನಿಂಗ್ಸ್'ಗಳನ್ನು ಪೂರೈಸಿದ್ದಾರೆ. ಏಳು ಬಾರಿ ಶಾಸಕರಾಗಿದ್ದಆರೆ. ಐದು ಬಾರಿ ಸಂಸದರಾಗಿದ್ದಾರೆ. ಮಾತ್ರವಲ್ಲ, ಐದು ಬಾರಿ ಮುಖ್ಯಮಂತ್ರಿಯೂ ಆಗಿದ್ದಾರೆ.ನಾಲ್ಕು ಸಲ ಹಿಮಾಚಲ ಪ್ರದೇಶ ರಾಜ್ಯದ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ವೀರಭದ್ರಸಿಂಗ್, ಪ್ರಸ್ತುತ ಲೋಕಸಭೆಯಲ್ಲಿ ಮಂಡಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.  
 
ರಾಮ್‌ಪುರ ಬುಶೇಹಾರ್ ಸಂಸ್ಥಾನದ ರಾಜಮನೆತನದಲ್ಲಿ ಜನಸಿದ ಸಿಂಗ್, ಹಿಮಾಚಲ ಕಾಂಗ್ರೆಸ್ ಮುಖಂಡರ ಪೈಕಿ ಅತ್ಯಂತ ಪ್ರಭಾವ ಶಾಲಿ ನಾಯಕರು. ಸಿಂಗ್ ಅವರದ್ದು ಸರ್ವಾಧಿಕಾರಿ ಧೋರಣೆ, ಜಟಿಲ ವ್ಯಕ್ತಿತ್ವ ಎಂದೆಲ್ಲ ವಿರೋಧಿಗಳು ಆರೋಪಿಸಿದರೂ, ಎಲ್ಲ ಮತದಾರರು ಗೌರವಿಸುವಂತೆ ನಡೆದುಕೊಂಡಿದ್ದಾರೆ.
 
ಎಂಟು ಬಾರಿ ಗೆಲುವು : ವೀರಭದ್ರಸಿಂಗ್ 1983 ರಿಂದ 85; 1985- ಮತ್ತು 1990; 1993 ಮತ್ತು 1998, 2003 ಮತ್ತು 2007ರಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.