ADVERTISEMENT

ದಾವೂದ್ ಕುಟುಂಬದ ಆಸ್ತಿ ಮುಟ್ಟುಗೋಲು

ಪಿಟಿಐ
Published 20 ಏಪ್ರಿಲ್ 2018, 19:30 IST
Last Updated 20 ಏಪ್ರಿಲ್ 2018, 19:30 IST
ಮುಂಬೈನಲ್ಲಿ ದಾವೂದ್ ತಾಯಿ ಮತ್ತು ಸೋದರಿ ಹೆಸರಿನಲ್ಲಿ ನೋಂದಣಿ ಆಗಿರುವ ಡಮರ್‌ವಾಲಾ (ಎಡಚಿತ್ರ), ಶಬನಮ್ ಗೆಸ್ಟ್ ಹೌಸ್ (ಬಲಭಾಗದಲ್ಲಿ ಮೇಲಿನ ಚಿತ್ರ) ಮತ್ತು ದೆಹಲಿ ಜೈಕಾ ಕಟ್ಟಡ –ಪಿಟಿಐ ಚಿತ್ರ
ಮುಂಬೈನಲ್ಲಿ ದಾವೂದ್ ತಾಯಿ ಮತ್ತು ಸೋದರಿ ಹೆಸರಿನಲ್ಲಿ ನೋಂದಣಿ ಆಗಿರುವ ಡಮರ್‌ವಾಲಾ (ಎಡಚಿತ್ರ), ಶಬನಮ್ ಗೆಸ್ಟ್ ಹೌಸ್ (ಬಲಭಾಗದಲ್ಲಿ ಮೇಲಿನ ಚಿತ್ರ) ಮತ್ತು ದೆಹಲಿ ಜೈಕಾ ಕಟ್ಟಡ –ಪಿಟಿಐ ಚಿತ್ರ   

ನವದೆಹಲಿ: ಮುಂಬೈನಲ್ಲಿರುವ ತಮ್ಮ ಏಳು ವಸತಿ ಕಟ್ಟಡಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವ ನಿರ್ಧಾರದ ವಿರುದ್ಧ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ತಾಯಿ ಅಮಿನಾ ಬಿ ಕಸ್ಕರ್‌ ಮತ್ತು ಸೋದರಿ ಹಸೀನಾ ಪಾರ್ಕರ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಆ ಸ್ವತ್ತುಗಳನ್ನು ವಶಕ್ಕೆ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯ ಹೊಂದಿರುವ ಈ ಏಳರಲ್ಲಿ ಎರಡು ಕಟ್ಟಡಗಳು ಅಮಿನಾ ಬಿ ಅವರ ಹೆಸರಿನಲ್ಲಿ ಮತ್ತು ಐದು ಕಟ್ಟಡಗಳು ಹಸೀನಾ ಅವರ ಹೆಸರಿನಲ್ಲಿ ನೋಂದಣಿ ಆಗಿವೆ. ಇವುಗಳನ್ನು ಖರೀದಿಸಲು ಹಣ ಎಲ್ಲಿಂದ ಬಂತು ಎಂಬ ಬಗ್ಗೆ ದಾಖಲಾತಿ ಕೊಡದ ಕಾರಣ ಸರ್ಕಾರ 1988ರಲ್ಲಿ ಈ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಿತ್ತು.

‘ಕಳ್ಳಸಾಗಣೆದಾರರು ಮತ್ತು ವಿದೇಶಿ ವಿನಿಮಯ ವಂಚಕರ ಆಸ್ತಿ ಮುಟ್ಟುಗೋಲು ಕಾಯ್ದೆ’ ಅಡಿ ಇವುಗಳ ಮುಟ್ಟುಗೋಲಿಗೆ ಸರ್ಕಾರ ಕ್ರಮ ತೆಗೆದುಕೊಂಡಿತ್ತು. ಇದರ ವಿರುದ್ಧ ದಾವೂದ್‌ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತ್ತು. ಆನಂತರ ಇಬ್ಬರೂ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.