ADVERTISEMENT

ದೀದಿ ನಾಡಲ್ಲಿ ವರ್ಣ ಸಂಹಿತೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 19:30 IST
Last Updated 18 ಫೆಬ್ರುವರಿ 2012, 19:30 IST

ಕೋಲ್ಕತ್ತ (ಐಎಎನ್‌ಎಸ್): ತಮ್ಮ ರಾಜಧಾನಿಗೆ ನೀಲಿ ಮತ್ತು ಬಿಳಿ ಬಣ್ಣದ ಸಮವಸ್ತ್ರ ತೊಡಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂದಾಗಿದ್ದಾರೆ. ಇದರಿಂದ `ಪಿಂಕ್ ಸಿಟಿ~ ಎಂದು ಖ್ಯಾತವಾಗಿರುವ ಜೈಪುರಕ್ಕೆ ಈಗ ಪ್ರತಿಸ್ಪರ್ಧಿ ಹುಟ್ಟಿಕೊಂಡಂತಾಗಿದೆ.

ಕೋಲ್ಕತ್ತ ಮಹಾನಗರದ ಉದ್ಯಾನವನಗಳು, ರಸ್ತೆಗಳು, ರೈಲ್ವೆ ಲೇನ್, ಜಂಕ್ಷನ್‌ಗಳು, ಮೇಲ್ಸೇತುವೆಗಳು, ಸಿಟಿ ಟ್ಯಾಕ್ಸಿ ಮಾತ್ರವಲ್ಲದೆ ಮರದ ಕೊಂಬೆಗಳು ಕೂಡ ಏಕರೂಪದ ಬಣ್ಣ ಲೇಪಿಸಿಕೊಳ್ಳಲಿವೆ. ಇದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪರಿಕಲ್ಪನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.