ADVERTISEMENT

ದುರ್ಗಾ ಅಮಾನತು : ಮುಲಾಯಂ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 19:59 IST
Last Updated 5 ಆಗಸ್ಟ್ 2013, 19:59 IST

ನವದೆಹಲಿ/ ಲಖನೌ (ಪಿಟಿಐ): ಐಎಎಸ್ ಅಧಿಕಾರಿ ದುರ್ಗಾ ಶಕ್ತಿ ನಾಗ್‌ಪಾಲ್ ಅವರನ್ನು ಅಮಾನತು ಮಾಡಿರುವುದು `ಸರಿ' ಹಾಗೂ `ಅದೇ ಅಂತಿಮ' ಎಂದು ಸಮರ್ಥಿಸಿಕೊಂಡಿರುವ ಸಮಾಜವಾದಿ ಪಕ್ಷ, ಬೇಕಿದ್ದರೆ ರಾಜ್ಯದ ಎಲ್ಲ ಐಎಎಸ್ ಅಧಿಕಾರಿಗಳನ್ನೂ ಕೇಂದ್ರ ಸರ್ಕಾರ ವಾಪಸ್ ಕರೆಸಿಕೊಳ್ಳಲಿ ಎಂದು ಕೆಣಕಿದೆ.

ಸಂಸತ್ ಭವನದ ಹೊರಗೆ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್, ಅಮಾನತು ಆದೇಶ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪಕ್ಷದ ಇನ್ನೊಬ್ಬ ಮುಖಂಡ ರಾಮ್‌ಗೋಪಾಲ್ ಯಾದವ್, `ಒಂದು ವೇಳೆ ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಲು ಬಯಸಿದರೆ, ಉತ್ತರ ಪ್ರದೇಶದಿಂದ ಎಲ್ಲ ಐಎಎಸ್ ಅಧಿಕಾರಿಗಳನ್ನೂ ತೆಗೆದುಹಾಕಲಿ. ನಮ್ಮ ಅಧಿಕಾರಿಗಳಿಂದಲೇ ನಾವು ಆಡಳಿತ ನಡೆಸುತ್ತೇವೆ' ಎಂದು ಸವಾಲು ಹಾಕಿದರು.

ಮೇಲ್ಮನವಿಗೆ ಅವಕಾಶ: ಅಮಾನತುಗೊಂಡಿರುವ ಅಧಿಕಾರಿಯು ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ಸಿಬ್ಬಂದಿ ಖಾತೆ ರಾಜ್ಯ ಸಚಿವ ವಿ.ನಾರಾಯಣಸ್ವಾಮಿ ತಿಳಿಸಿದ್ದಾರೆ. `ಆದರೆ ಈವರೆಗೆ ದುರ್ಗಾ ಶಕ್ತಿ ಅವರು ನಮಗೆ ಮೇಲ್ಮನವಿ ಸಲ್ಲಿಸಿಲ್ಲ' ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.