ADVERTISEMENT

ದೆಹಲಿಯಲ್ಲಿ ದೂಳಿನಿಂದ ಕೂಡಿದ ಭಾರಿ ಬಿರುಗಾಳಿ

ಏಜೆನ್ಸೀಸ್
Published 16 ಮೇ 2018, 5:30 IST
Last Updated 16 ಮೇ 2018, 5:30 IST
ಲೋಧಿ ಕಾಲೊನಿಯಲ್ಲಿ ಬಿರುಗಾಳಿಯ ಪರಿಣಾಮ ಮರ ಬಿದ್ದು ಕಾರು ಜಖಂಗೊಂಡಿರುವುದು – ಎಎನ್‌ಐ ಚಿತ್ರ
ಲೋಧಿ ಕಾಲೊನಿಯಲ್ಲಿ ಬಿರುಗಾಳಿಯ ಪರಿಣಾಮ ಮರ ಬಿದ್ದು ಕಾರು ಜಖಂಗೊಂಡಿರುವುದು – ಎಎನ್‌ಐ ಚಿತ್ರ   

ದೆಹಲಿ: ಕೆಲ ದಿನಗಳ ಹಿಂದಷ್ಟೇ ಭಾರಿ ಮಳೆ ಮತ್ತು ಬಿರುಗಾಳಿಗೆ ನಲುಗಿದ್ದ ದೆಹಲಿಯಲ್ಲಿ ಬುಧವಾರವೂ ದೂಳಿನಿಂದ ಕೂಡಿದ ಬಿರುಗಾಳಿ ಬೀಸಿದ್ದು, ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

ನಸುಕಿನ ಜಾವ ಬೀಸಿದ ಬಿರುಗಾಳಿಯಿಂದಾಗಿ ಹತ್ತಾರು ಮರಗಳು ಧರೆಗುರುಳಿವೆ. ಹಲವು ಪ್ರದೇಶಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಅದೃಷ್ಟವಶಾತ್, ಸಾವು–ನೋವು ಸಂಭವಿಸಿಲ್ಲ.

ಭಾನುವಾರ ರಾತ್ರಿ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ ಮತ್ತು ಆಂಧ್ರ ಪ್ರದೇಶಗಳಲ್ಲಿ ಭಾರಿ ಮಳೆ, ಬಿರುಗಾಳಿ ಮತ್ತು ಸಿಡಿಲಿಗೆ 50ಕ್ಕೂ ಹೆಚ್ಚು ಜನ ಮೃತಪಟ್ಟು, 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ADVERTISEMENT

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.