ADVERTISEMENT

ದೆಹಲಿಯಲ್ಲಿ ಹೊಸದಾಗಿ 38 ಡೆಂಗೆ ಪ್ರಕರಣಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2012, 8:30 IST
Last Updated 15 ನವೆಂಬರ್ 2012, 8:30 IST

 ನವದೆಹಲಿ, (ಪಿಟಿಐ): ದೇಶದ ರಾಜಧಾನಿ  ದೆಹಲಿ ಈಗ ಡೆಂಗೆ ರೋಗದ ತಾಣವಾಗುತ್ತಿದೆ, ನವದೆಹಲಿಯಲ್ಲಿ ಹೊಸದಾಗಿ 38 ಡೆಂಗೆ ಪ್ರಕರಣಗಳು ಪತ್ತೆಯಾಗಿವೆ, ಇಲ್ಲಿಯವರೆಗೂ 1584 ಡೆಂಗೆ ಪ್ರಕರಣಗಳು ದಾಖಲಾಗಿವೆ.

37 ಪ್ರಕರಣಗಳು ಪೂರ್ವ, ದಕ್ಷಿಣ, ಹಾಗೂ ಉತ್ತರ ದೆಹಲಿಯಲ್ಲಿ ಪತ್ತೆಯಾದರೆ, ಉಳಿದ ಒಂದು ಪ್ರಕರಣ ಮಾತ್ರ ರಾಜಧಾನಿಯಿಂದ ಹೊರಗಿನದು ಎಂದು ದೆಹಲಿ ಕಾರ್ಪೋರೇಷನ್ ತಿಳಿಸಿದೆ. ಇಲ್ಲಿಯವರೆಗೂ 1584 ಪ್ರಕರಣಗಳಲ್ಲಿ 16 ಜನ ಮೃತಪಟ್ಟಿದ್ದಾರೆ.

594 ಪ್ರಕರಣಗಳು ದಕ್ಷಿಣ ದೆಹಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಂಡು ಬಂದಿವೆ,  532 ಪ್ರಕರಣಗಳು ಉತ್ತರ ದೆಹಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಂಡುಬಂದಿವೆ. ಉಳಿದಂತೆ 390 ಪ್ರಕರಣಗಳು ಪೂರ್ವ ದೆಹಲಿ ಮಹಾನಗರ ಪಾಲಿಕೆಯಲ್ಲಿ ಕಂಡು ಬಂದಿವೆ. ಉಳಿದ ಪ್ರಕರಣಗಳು ಉತ್ತರ ದೆಹಲಿ ಮಹಾನಗರ ಪಾಲಿಕೆ ಹಾಗೂ ದೆಹಲಿ ದಂಡು ಪ್ರದೇಶಗಳಲ್ಲಿ ಪತ್ತೆಯಾಗಿವೆ.

 2010ರಲ್ಲಿ  976 ಪ್ರಕರಣಗಳು ಪತ್ತಯಾಗಿದ್ದು 5 ಜನ ಮೃತ ಪಟ್ಟಿದ್ದರು, ಇಲ್ಲಿಯವರೆಗೂ ಒಟ್ಟು 5994 ಡೆಂಗೆ ಪ್ರಕರಣಗಳು ದಾಖಲಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT