ADVERTISEMENT

ದೆಹಲಿಯ ಕೆಂಪುಕೋಟೆ ಮೇಲೆ ಹಾರಿದ 71ನೇ ಸ್ವಾತಂತ್ರ್ಯೋತ್ಸವದ ತ್ರಿವರ್ಣ ಧ್ವಜ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2017, 4:40 IST
Last Updated 15 ಆಗಸ್ಟ್ 2017, 4:40 IST
ದೆಹಲಿಯ ಕೆಂಪುಕೋಟೆ ಮೇಲೆ ಹಾರಿದ 71ನೇ ಸ್ವಾತಂತ್ರ್ಯೋತ್ಸವದ ತ್ರಿವರ್ಣ ಧ್ವಜ
ದೆಹಲಿಯ ಕೆಂಪುಕೋಟೆ ಮೇಲೆ ಹಾರಿದ 71ನೇ ಸ್ವಾತಂತ್ರ್ಯೋತ್ಸವದ ತ್ರಿವರ್ಣ ಧ್ವಜ   

ನವದೆಹಲಿ: ರಾಷ್ಟ್ರ ರಾಜಧಾನಿಯ ಕೆಂಪುಕೋಟೆಯ ಮೇಲೆ ಮಂಗಳವಾರ ಪ್ರಧಾನಿಯಿಂದ ತ್ರಿವರ್ಣ ಧ್ವಜಾರೋಹಣ ನೆರವೇರುವ ಮೂಲಕ 71ನೇ ಸ್ವಾತಂತ್ರ್ಯೋತ್ಸವಕ್ಕೆ ನೆರೆದಿದ್ದ ದೇಶಾಭಿಮಾನಿಗಳು ಸಾಕ್ಷಿಯಾದರು.

ರಾಷ್ಟ್ರದೆಲ್ಲೆಡೆ ಸ್ವಾಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸಲ್ಲಿಸಿ, ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು.

ಭಾಷಣ ಮುಗಿಸಿದಿ ಪ್ರಧಾನಿ ಜನರತ್ತ ಕೈಬೀಸಿ ಶುಭ ಕೋರಿದರು. ಆಗಸದಲ್ಲಿ ಬಲೂನುಗಳು ತ್ರಿವರ್ಣ ಧ್ವಜವನ್ನು ಹೊತ್ತು ಮತ್ತಷ್ಟು ಮತ್ತಷ್ಟು ಎತ್ತರಕ್ಕೆ ಹಾರಿದವು, ನೆರೆದಿದ್ದ ದೇಶಾಭಿಮಾನಿಗಳಲ್ಲಿ ಉತ್ಸಾಹ ತುಂಬಿದವು.

ADVERTISEMENT

ಭಾಷಣ ಮುಗಿದ ಬಳಕ ಕೆಂಪುಕೋಟೆಯಿಂದ ಕೆಳಗಿಳಿದ ಬಂದು ಮೋದಿ ಅವರು, ಶಿಸ್ತಿನಿಂದ ಕುಳಿತಿದ್ದ ಮಕ್ಕಳ ಬಳಿಗೆ ಬಂದು ಶುಭಕೋರುತ್ತಾ ಮಕ್ಕಳ ಮಧ್ಯೆ ಬೆರೆತರು, ಮಕ್ಕಳು ಪ್ರಧಾನಿ ಅವರ ಕೈ ಕುಲುಕಿ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.