ADVERTISEMENT

ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಭೂಕಂಪನ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2013, 11:39 IST
Last Updated 16 ಏಪ್ರಿಲ್ 2013, 11:39 IST

ನವದೆಹಲಿ /ಗುವಹಟಿ/ಚಂಡೀಗಡ/ಒಡಿಶಾ (ಪಿಟಿಐ/ಐಎಎನ್‌ಎಸ್): ದೆಹಲಿ, ಪಂಜಾಬ್, ಹರಿಯಾಣ ಮತ್ತು ಚಂಡೀಗಡ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಂಗಳವಾರ ಸಂಜೆ 4ರ ವೇಳೆಗೆ ಭೂಕಂಪನ ಸಂಭವಿಸಿದೆ. ಇದುವರೆಗೂ ಯಾವುದೇ ಪ್ರಾಣಹಾನಿ ಹಾಗೂ ಆಸ್ತಿ ಪಾಸ್ತಿ ನಷ್ಟ ಉಂಟಾದ ತಕ್ಷಣದ ವರದಿ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಜೆ 4.21ರ ವೇಳೆಗೆ ಕೆಲವು ಸೆಕೆಂಡುಗಳವರೆಗೆ ನವದೆಹಲಿಯಲ್ಲಿ ಭೂಕಂಪನದ ಅನುಭವವಾಯಿತು.

ರಾಜಧಾನಿ ದೆಹಲಿಯಲ್ಲಿ ಭೂಕಂಪನದ ಅನುಭವವಾಗುತ್ತಿದ್ದಂತೆಯೇ ಜನರು ಕಚೇರಿ ಮತ್ತು ಮನೆಗಳಿಂದ ಹೊರಕ್ಕೆ ಓಡಿಬಂದರು.

ಇದಕ್ಕೂ ಮುಂಚೆ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯದಲ್ಲಿಯೂ ಮಂಗಳವಾರ ಬೆಳಿಗ್ಗೆ ಲಘು ಭೂಕಂಪನ ಸಂಭವಿಸಿ, ಭೂಕುಸಿತದಲ್ಲಿ ಒಂದು ಮಗು ಸಾವನ್ನಪ್ಪಿದ ವರದಿ ಬಂದಿದೆ.  ಒಡಿಶಾದಿಂದಲೂ ಭೂಮಿ ಕಂಪಿಸಿದ ವರದಿ ಬಂದಿದೆ.

ಹೆಚ್ಚಿನ ವರದಿಯನ್ನು ನಿರೀಕ್ಷಿಸಲಾಗಿದೆ....

ವಿಶ್ವದಾದ್ಯಂತ ವಿವಿಧ ಕಡೆಗಳಲ್ಲಿ 24 ಗಂಟೆಗಳಲ್ಲಿ ಭೂಕಂಪನದ ಅನುಭವವಾಗಿದ್ದು ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಬಹುದು: http://www.volcanodiscovery.com/earthquakes/today.html
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.