ನವದೆಹಲಿ: ಉತ್ತರಾಖಂಡದಲ್ಲಿ ತ್ವರಿತವಾಗಿ ರಕ್ಷಣಾ ಮತ್ತು ಪರಿಹಾರ ಕಾರ್ಯ ನಡೆಸಲು ವಾಯುಪಡೆಯು ಅತ್ಯಾಧುನಿಕ `ಸಿ- 130ಜೆ' ವಿಮಾನವನ್ನು ನಿಯೋಜಿಸಲಾಗಿದೆ. ಇದು ಧರಾಸುವಿನಲ್ಲಿ (ಸಮುದ್ರ ಮಟ್ಟದಿಂದ 2900 ಅಡಿ ಎತ್ತರ) ತಾತ್ಕಾಲಿಕವಾಗಿ ನಿರ್ಮಿಸಲಾದ 1300 ಅಡಿ ಉದ್ದದ ರನ್ ವೇನಲ್ಲಿ ಶನಿವಾರ ಇಳಿದಿದೆ.
ಈ ವಿಶೇಷ ವಿಮಾನದ ಚಾಲನೆಗೆ 2.5 ಕಿ.ಮೀ. ಉದ್ದ ರನ್ ವೇ ಅಗತ್ಯವಿದೆ. ಆದರೆ, ತುರ್ತು ಸನ್ನಿವೇಶಗಳಲ್ಲಿ ಕಡಿಮೆ ಅಂತರದ ರನ್ ವೇನಲ್ಲೂ ಇದು ಚಾಲನೆಗೊಳ್ಳುತ್ತದೆ. ವಿಶೇಷ ತರಬೇತಿ ಪಡೆದ ಕಮೊಂಡೊ ದಳ ಹೊಂದಿರುವ ಈ ವಿಮಾನವು ವ್ಯತಿರಿಕ್ತ ವಾತಾವರಣದಲ್ಲೂ ಕಾರ್ಯ ನಿರ್ವಹಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.