ನವದೆಹಲಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಎನ್‌ಆರ್‌ಇಜಿ) ಅನುಷ್ಠಾನದಲ್ಲಿ ಧಾರವಾಡ ದೇಶದ ಅತ್ಯುತ್ತಮ ಜಿಲ್ಲೆ ಎಂಬ ಹಿರಿಮೆಗೆ ಪಾತ್ರವಾಗಿದೆ.
ಯೋಜನೆ ಜಾರಿಯಾಗಿರುವ 616 ಜಿಲ್ಲೆಗಳ ಪೈಕಿ ವಿನೂತನ ಮಾದರಿಗಾಗಿ ಪಟ್ಟಿ ಮಾಡಲಾಗಿರುವ ಹತ್ತು ಜಿಲ್ಲೆಗಳಲ್ಲಿ ಧಾರವಾಡವೂ ಸೇರಿದೆ.
ಬುಧವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮನಮೋಹನ್‌ಸಿಂಗ್ ಅವರಿಂದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಶಿಖಾ ಪ್ರಶಸ್ತಿ ಸ್ವೀಕರಿಸಿದರು.ಉದ್ಯೋಗ ಖಾತರಿ ಯೋಜನೆಯನ್ನು ಇತರ ಯೋಜನೆಗಳ ಜತೆ ಸೇರ್ಪಡೆ ಮಾಡಿರುವುದರಿಂದ ಬಡವರ ಜೀವನಮಟ್ಟ ಸುಧಾರಿಸಿದೆ. ಈ ಹೊಸ ಪ್ರಯೋಗ ಕಾರ್ಮಿಕರು ಅದರಲ್ಲೂ ಮಹಿಳೆಯರನ್ನು ಹೆಚ್ಚು ಆಕರ್ಷಿಸಿದೆ ಎಂದು ಶಿಖಾ ಕಾರ್ಯಕ್ರಮದಲ್ಲಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.