ADVERTISEMENT

ಧ್ವಜಾರೋಹಣ ನೆರವೇರಿಸಿದ ಪ್ರಣವ್‌ ಮುಖರ್ಜಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2016, 8:53 IST
Last Updated 26 ಜನವರಿ 2016, 8:53 IST
ದೆಹಲಿಯ ರಾಜ್‌ಪಥದಲ್ಲಿ ಮಂಗಳವಾರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಾನ್‌ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಹಾಗೂ ರಾಷ್ಟ್ರ‍ಪತಿ ಪ್ರಣವ್ ಮುಖರ್ಜಿ ಅವರು ಜನರತ್ತ ಕೈ ಬೀಸಿದರು. –ಎಎಫ್‌ಪಿ ಚಿತ್ರ
ದೆಹಲಿಯ ರಾಜ್‌ಪಥದಲ್ಲಿ ಮಂಗಳವಾರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಾನ್‌ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಹಾಗೂ ರಾಷ್ಟ್ರ‍ಪತಿ ಪ್ರಣವ್ ಮುಖರ್ಜಿ ಅವರು ಜನರತ್ತ ಕೈ ಬೀಸಿದರು. –ಎಎಫ್‌ಪಿ ಚಿತ್ರ   

ನವದೆಹಲಿ: ರಾಜಧಾನಿ ದೆಹಲಿಯ ರಾಜ್‌ಪಥದಲ್ಲಿ ರಾಷ್ಟ್ರ‍ಪತಿ ಪ್ರಣವ್ ಮುಖರ್ಜಿ ಅವರು 67ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಭಾರತೀಯ ಸೇನಾ ಶಕ್ತಿ ಪ್ರದರ್ಶನ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದರು.

ಫ್ಲಟೂನ್ ಕಮಾಂಡರ್ ರಾಕೇಶ್‌ ಯಾಧವ್ ಅವರ ನೇತೃತ್ವದಲ್ಲಿ ರಾಷ್ಟ್ರಪತಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ವಾದ್ಯವೃಂದ ಸುಶ್ರಾವ್ಯವಾಗಿ ನುಡಿಸಿದ ರಾಷ್ಟ್ರಗೀತೆಯೊಂದಿಗೆ ಗೌರವ ಸಲ್ಲಿಸಲಾಯಿತು.

ಅಶ್ವ ದಳ ಮುಂದಾಳತ್ವದಲ್ಲಿ ರಾಜ್‌ಪಥಕ್ಕೆ ಗಣರಾಜ್ಯೋತ್ಸವದ ಅತಿಥಿ ಫ್ರಾನ್ಸ್‌ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್‌ ಅವರನ್ನು ಕರೆತರಲಾಯಿತು. ಪ್ರಧಾನಿ ಮೋದಿ ಅವರು ಒಲಾಂಡ್ ಅವರನ್ನು ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.