ADVERTISEMENT

ನಕ್ಸಲ್ ನಾಯಕರ `ಬೇಟೆ'ಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 19:59 IST
Last Updated 6 ಜೂನ್ 2013, 19:59 IST

ನವದೆಹಲಿ:  ನಕ್ಸಲರನ್ನು ಹಿಮ್ಮೆಟ್ಟಿಸಬೇಕೆಂದರೆ ಗುಪ್ತದಳದ ಮಾಹಿತಿ ಆಧರಿಸಿ ಆ ಗುಂಪಿನ ಉನ್ನತ ನಾಯಕರ ಮೇಲೆ `ಕರಾರುವಾಕ್ ದಾಳಿ' ನಡೆಸುವುದೇ ಸೂಕ್ತ ಎಂದು ಕೇಂದ್ರ ಸರ್ಕಾರ ಹಾಗೂ ನಕ್ಸಲ್ ಪೀಡಿತ ಒಂಬತ್ತು ರಾಜ್ಯಗಳ ಮುಖ್ಯಮಂತ್ರಿಗಳು ಒಮ್ಮತಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಂತರಿಕ ಭದ್ರತೆ ಕುರಿತು ಬುಧವಾರ ಇಲ್ಲಿ ನಡೆದ ಮುಖ್ಯಮಂತ್ರಿಗಳ ಸಭೆಯ ನಂತರ, ನಕ್ಸಲ್ ಪೀಡಿತ ರಾಜ್ಯಗಳ ಹಿರಿಯ ಅಧಿಕಾರಿಗಳು ಮತ್ತು ಮುಖ್ಯಮಂತ್ರಿಗಳು ಈ ಸಲಹೆ ನೀಡಿದ್ದಾರೆ.

ಆಂಧ್ರದ ಗ್ರೇ ಹೌಂಡ್ಸ್ ದಳವು ಏ.16ರಂದು ಛತ್ತೀಸಗಡದ ಕಾಡಿನಲ್ಲಿ ಅಡಗಿದ್ದ ನಕ್ಸಲರ ಮೇಲೆ ದಾಳಿ ಮಾಡಿ 10 ನಾಯಕರನ್ನು ಹತ್ಯೆ ಮಾಡಿದ ಬಗೆ ವಿವರಿಸಿ, ಇದೇ ಮಾದರಿಯನ್ನು ಇತರೆಡೆಯೂ ಅಳವಡಿಸಿಕೊಳ್ಳಲು ಮನವರಿಕೆ ಮಾಡಿಕೊಡಲಾಯಿತು.
ಛತ್ತೀಸಗಡದಲ್ಲಿ ನಕ್ಸಲರು ಕಾಂಗ್ರೆಸ್ ಮುಖಂಡರ ಮೇಲೆ ದಾಳಿ ನಡೆಸಿ 26 ಜನರನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಈ ಕಠಿಣ ನಿರ್ಧಾರ ಹೊರಹೊಮ್ಮಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.