ADVERTISEMENT

ನಟ ಅಮೀರ್‌ಖಾನ್‌ಗೆ ನೋಟಿಸ್‌

ಸಲಿಂಗಕಾಮ ಪ್ರಚಾರ ಆರೋಪ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2014, 19:30 IST
Last Updated 1 ನವೆಂಬರ್ 2014, 19:30 IST

ಚಂಡೀಗಡ(ಪಿಟಿಐ): ಬಾಲಿವುಡ್‌ ನಟ ಅಮೀರ್ ಖಾನ್‌ ಅವರಿಗೆ ಇಲ್ಲಿನ ಸಿವಿಲ್‌ ಕೋರ್ಟ್‌ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.
ಖಾಸಗಿ ವಾಹಿನಿ­ಯಲ್ಲಿ ಅಮೀರ್‌­ಖಾನ್‌ ನಡೆಸಿಕೊಡುವ ‘ಸತ್ಯಮೇವ ಜಯತೆ’ ಕಾರ್ಯಕ್ರಮದಲ್ಲಿ    ಸಲಿಂಗ­ಕಾಮದ ಬಗ್ಗೆ ಪ್ರಚಾರ ಮಾಡಿದ್ದಾರೆ ಎಂದು ದೂರಿ ಅವರ ವಿರುದ್ಧ ದೂರು ಸಲ್ಲಿಸಲಾಗಿತ್ತು. ಡಿ.19ರ ಒಳಗಾಗಿ ಉತ್ತರ ನೀಡುವಂತೆ ಕೋರ್ಟ್‌ ತಿಳಿಸಿದೆ.

ವಕೀಲೆ ಮನ್‌ದೀಪ್‌ ಕೌರ್‌ ಅಮೀರ್‌ ವಿರುದ್ಧ ಸಲ್ಲಿಸಿದ್ದ ಅರ್ಜಿಗೆ   ಸಿವಿಲ್‌ ಕೋರ್ಟ್‌ ನ್ಯಾಯಾಧೀಶ ಜಸ್ವಿಂದರ್‌ ಸಿಂಗ್‌ ನೋಟಿಸ್‌ ಜಾರಿ ಮಾಡಿದ್ದಾರೆ.  ಅಮೀರ್‌ಖಾನ್‌ ತಮ್ಮ ಕಾರ್ಯ ಕ್ರಮದಲ್ಲಿ ಸಲಿಂಗ ಕಾಮದ ಬಗ್ಗೆ ಸುಪ್ರೀಂಕೋರ್ಟ್‌ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಕೌರ್‌ ತಮ್ಮ ಅರ್ಜಿಯಲ್ಲಿ ದೂರಿದ್ದಾರೆ.

ಅ.19 ರಂದು ಪ್ರಸಾರವಾಗಿದ್ದ ಕಾರ್ಯಕ್ರಮದಲ್ಲಿ, ಅಮೀರ್‌್ ಖಾನ್‌ ಸಲಿಂಗಿಗಳ ಜೀವನಶೈಲಿ ಮತ್ತು ಹಕ್ಕು ಗಳ ಬಗ್ಗೆ ಚರ್ಚೆ ನಡೆಸಿದ್ದರು. ಈ ಬಗ್ಗೆ ಸುಪ್ರೀಂಕೋರ್ಟ್‌ ಸ್ಪಷ್ಟವಾದ ನಿರ್ದೇ ಶನಗಳನ್ನು ನೀಡಿದ್ದರೂ ಉಲ್ಲಂಘಿಸಿ­ದ್ದಾರೆ ಎಂದು ಕೌರ್‌ ಹೇಳಿದ್ದಾರೆ.
ಗಂಡು ಸಲಿಂಗಿ ಮತ್ತು ಹೆಣ್ಣು ಸಲಿಂಗಿ  ಕಾನೂನು ಬಾಹಿರ ಎಂಬ ಐಪಿಸಿ 377 ವಿಧಿಗೆ ತಿದ್ದುಪಡಿಗಳನ್ನು ತರಲು ಸಾರ್ವ­ಜನಿಕರು ಮತ ಹಾಕುವಂತೆ ಅಮೀರ್‌ ಮನವಿ ಮಾಡಿದ್ದರು ಎಂದು ಅವರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.