ADVERTISEMENT

ನಾಗಾಲ್ಯಾಂಡ್‌ನ ಮುಖ್ಯಮಂತ್ರಿಯಾಗಿ ನೆಫಿಯು ರಿಯೊ ಪ್ರಮಾಣ ವಚನ ಸ್ವೀಕಾರ

ಏಜೆನ್ಸೀಸ್
Published 8 ಮಾರ್ಚ್ 2018, 10:56 IST
Last Updated 8 ಮಾರ್ಚ್ 2018, 10:56 IST
ನೆಫಿಯು ರಿಯೊ
ನೆಫಿಯು ರಿಯೊ   

ಕೊಹಿಮಾ : 18 ಶಾಸಕರನ್ನು ಹೊಂದಿರುವ ನ್ಯಾಷನಲಿಸ್ಟ್‌ ಡೆಮಾಕ್ರಟಿಕ್‌ ಪೀಪಲ್ಸ್‌ ಪಾರ್ಟಿ (ಎನ್‌ಡಿಪಿಪಿ) ಮುಖ್ಯಸ್ಥ ನೆಫಿಯು ರಿಯೊ ಅವರು ನಾಗಾಲ್ಯಾಂಡ್‌ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು.

ಬಿಜೆಪಿಯ 12 ಶಾಸಕರು, ಜೆಡಿಯುನ ಒಬ್ಬ ಮತ್ತು ಒಬ್ಬ ಪಕ್ಷೇತರ ಶಾಸಕ ರಿಯೊ ಅವರನ್ನು ಬೆಂಬಲಿಸಿರುವುದರಿಂದ ಸರ್ಕಾರ ರಚನೆಯಾಗಿದೆ. ಬಿಜೆಪಿಯ ವೈ.ಪತ್ತೊನ್‌ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಈ ಹೊಸ ಒಕ್ಕೂಟವನ್ನು ‘ಪೀಪಲ್ಸ್‌ ಡೆಮಕ್ರಟಿಕ್‌ ಅಲಯನ್ಸ್‌’ (ಪಿಡಿಎ) ಎಂದು ಕರೆಯುವುದಾಗಿ ನೂತನ ಮುಖ್ಯಮಂತ್ರಿ ರಿಯೊ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT