ADVERTISEMENT

ನಾಯಿ ಮೇಲೆ ಆ್ಯಸಿಡ್‌ ಎರಚಿದ ಭೂಪ!

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST

ಕೊಚ್ಚಿ(ಪಿಟಿಐ): ರಾತ್ರಿ ವೇಳೆ ಪಕ್ಕದ ಮನೆಯ ಸುತ್ತ ಸುತ್ತುತ್ತಿದ್ದ ವ್ಯಕ್ತಿ­ಯನ್ನು ಹಿಡಿದುಕೊಟ್ಟ ತಪ್ಪಿಗೆ ನಾಯಿ­ಯೊಂದು ಆ್ಯಸಿಡ್‌ ದಾಳಿಗೆ ಒಳಗಾಗಿ­ರುವ ವಿಚಿತ್ರ ಘಟನೆ ಕೊಚ್ಚಿಯಲ್ಲಿ ಸೋಮವಾರ ನಡೆದಿದೆ.

  ಇದರಿಂದ ನಾಯಿಯ ಕಣ್ಣು ಮತ್ತು ಇತರೆ ಕಡೆ ಗಂಭೀರ ಗಾಯಗಳಾಗಿವೆ. ‘ನಾಯಿ ಕೂಗುತ್ತಿರುವುದನ್ನು ಕೇಳಿಸಿ­ಕೊಂಡ ಮಾಲೀಕರು ಅದನ್ನು ನೋಡಿ­ದಾಗ ಈ ಘಟನೆ ಬೆಳಕಿಗೆ ಬಂದಿದೆ. ಪ್ರಕರ­ಣಕ್ಕೆ ಸಂಬಂಧಿಸಿದಂತೆ 67 ವಯಸ್ಸಿನ ವ್ಯಕ್ತಿಯನ್ನು ಬಂಧಿಸಲಾ­ಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.