ADVERTISEMENT

ನಿರ್ದೇಶಕ ಮಹೇಶ್‌ ಭಟ್‌ಗೆ ಬೆದರಿಕೆ

ವಾಟ್ಸ್‌ ಆ್ಯಪ್‌ನಲ್ಲಿ ಬೆದರಿಕೆ ಹಾಕಿದ್ದ ಸಂದೀಪ್ ಸಾಹು

ಪಿಟಿಐ
Published 2 ಮಾರ್ಚ್ 2017, 20:03 IST
Last Updated 2 ಮಾರ್ಚ್ 2017, 20:03 IST
ನಿರ್ದೇಶಕ ಮಹೇಶ್‌ ಭಟ್‌ಗೆ ಬೆದರಿಕೆ
ನಿರ್ದೇಶಕ ಮಹೇಶ್‌ ಭಟ್‌ಗೆ ಬೆದರಿಕೆ   
ಮುಂಬೈ: ನಿರ್ದೇಶಕ ಮಹೇಶ್ ಭಟ್‌ ಅವರಿಗೆ  ₹ 50 ಲಕ್ಷ ನೀಡುವಂತೆ ಒತ್ತಾಯಿಸಿ ವಾಟ್ಸ್‌ ಆ್ಯಪ್‌ನಲ್ಲಿ ಬೆದರಿಕೆ ಹಾಕಿದ್ದ ಸಂದೀಪ್ ಸಾಹು ಎಂಬ ಯುವಕನನ್ನು ಪೊಲೀಸರು ಉತ್ತರಪ್ರದೇಶದಲ್ಲಿ ಬಂಧಿಸಿದ್ದಾರೆ. 
 
ಈ ಸಂಬಂಧ ಮಹೇಶ್‌ ಭಟ್‌ ಅವರು ಮುಂಬೈನ ಜುಹು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಪರಾಧ ವಿಭಾಗದ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದರು.
 
ಮಹೇಶ್‌ ಭಟ್‌ ಅವರಿಗೆ ಆರೋಪಿಯು ಉತ್ತಪ್ರದೇಶದಿಂದ ಹಣ ನೀಡುವಂತೆ ಬೆದರಿಕೆ ಹಾಕಿದ್ದ. ಹಣ ನೀಡದಿದ್ದರೆ ಮಗಳು ಅಲಿಯಾ ಭಟ್‌ರನ್ನು ಕೊಲ್ಲುವುದಾಗಿ ಸಂದೇಶ ಕಳುಹಿಸಿದ್ದ ಎಂದು ಡಿಸಿಪಿ ವಿನಯ್‌ ರಾಥೋಡ್‌ ತಿಳಿಸಿದ್ದಾರೆ. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.