ADVERTISEMENT

ನಿರ್ಧಾರ ಮಾಡಿಲ್ಲ ನ್ಯಾ. ಗಂಗೂಲಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 19:30 IST
Last Updated 11 ಡಿಸೆಂಬರ್ 2013, 19:30 IST

ಕೋಲ್ಕತ್ತ (ಪಿಟಿಐ): ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿ­ಸಿ­ರುವ ಯುವ ವಕೀಲೆ ಒಂದು ವೇಳೆ ಪೊಲೀಸ್‌ ಪ್ರಕರಣ ದಾಖಲಿಸಿದಲ್ಲಿ ಮುಂದೇನು ಮಾಡಬೇಕು ಎಂಬುದರ ಬಗ್ಗೆ ಇನ್ನೂ  ನಿರ್ಧಾರಮಾಡಿಲ್ಲ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯ­ಮೂರ್ತಿ ಅಶೋಕ ಕುಮಾರ್‌ ಗಂಗೂಲಿ­ ತಿಳಿಸಿದ್ದಾರೆ.

ಈ ಕುರಿತ ಸುದ್ದಿಗಾರರ ಪ್ರಶ್ನೆಗಳಿಗೆ ಸಿಟ್ಟಿನಿಂದಲೇ ಉತ್ತರಿಸಿದ ನ್ಯಾ. ಗಂಗೂಲಿ, ‘ಅನೇಕರು ನನ್ನ ಹೇಳಿಕೆ­ಗಳನ್ನು ತಿರುಚುತ್ತಿದ್ದಾರೆ. ಈಗಿನ ಸನ್ನಿ­ವೇಶದಲ್ಲಿ ನಾನು ಈ ಬಗ್ಗೆ ಯಾವುದೇ ನಿರ್ಧಾರಕ್ಕೂ ಬಂದಿಲ್ಲ’ ಎಂದರು.

ಘಟನೆಯ ಬಗ್ಗೆ ಠಾಣೆಯಲ್ಲಿ ಎಫ್‌ಐ­ಆರ್‌ ದಾಖಲಿಸುವಂತೆ ಮಹಿಳಾ­­ ಹಕ್ಕು ಕಾರ್ಯಕರ್ತೆ ಸಂತಶ್ರೀ ಅವರು­ ­ಮಂಗಳ­­­­ವಾರ ಯುವ ವಕೀಲೆಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.