ADVERTISEMENT

ನಿವೃತ್ತ ಸೇನಾಧಿಕಾರಿಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 18:10 IST
Last Updated 19 ಫೆಬ್ರುವರಿ 2011, 18:10 IST

ಜಲಂಧರ್ (ಐಎಎನ್‌ಎಸ್): ಬಹುಕೋಟಿ ಅಕ್ಕಿ ಹಗರಣದಲ್ಲಿ ಶಾಮೀ ಲಾದ ಆರೋಪದ ಮೇಲೆ ಸೇನೆಯ ಕೋರ್ಟ್ ಮಾರ್ಷಲ್‌ಗೆ ಒಳಗಾಗಿ ಮೂರು ವರ್ಷ ಕಠಿಣ ಶಿಕ್ಷೆಗೆ ಗುರಿಯಾಗಿರುವ ಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಎಸ್.ಕೆ.ಸಾಹ್ನಿ ಅವರನ್ನು ಶನಿವಾರ ಬಂಧನಕ್ಕೆ ಒಳಪಡಿಸಲಾಯಿತು.

ಸೇನೆಯ ಅತ್ಯುನ್ನತ ಹುದ್ದೆಯ ಅಧಿಕಾರಿಯೊಬ್ಬರು ಹಗರಣದ ಹಿನ್ನೆಲೆಯಲ್ಲಿ ಕೋರ್ಟ್ ಮಾರ್ಷಲ್ ಶಿಕ್ಷೆಗೆ ಒಳಗಾಗಿ ಬಂಧಿತರಾಗಿರುವುದು ಇದೇ ಮೊದಲು.ಕೋರ್ಟ್ ಮಾರ್ಷಲ್ ಸಂದರ್ಭದಲ್ಲಿ ಸಾಹ್ನಿ ಅವರು ಸೇನೆಯ ಶಿಸ್ತಿಗೆ ವಿರುದ್ಧವಾಗಿ ದುರ್ವರ್ತನೆಯಿಂದ ನಡೆದುಕೊಂಡಿರುವುದೂ ಸಾಬೀತಾಗಿದೆ. ಈ ಕಾರಣದಿಂದಾಗಿ ಸಾಹ್ನಿ ಅವರಿಗೆ ನಿವೃತ್ತಿಯ ನಂತರ ದೊರೆಯಬೇಕಾದ ಎಲ್ಲಾ ಆರ್ಥಿಕ ಸವಲತ್ತುಗಳನ್ನು ತಡೆಹಿಡಿಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.