ADVERTISEMENT

ನಿಷೇಧವಿದ್ದರೂ ಸಿಗರೇಟ್ ಬೀಡಿ, ಸಾಗಣೆ

​ಪ್ರಜಾವಾಣಿ ವಾರ್ತೆ
Published 18 ಮೇ 2012, 19:30 IST
Last Updated 18 ಮೇ 2012, 19:30 IST

ಹೈದರಾಬಾದ್: ತಿರುಪತಿ ದೇವಸ್ಥಾನ ದ ಪರಿಸರದಲ್ಲಿ ಬೀಡಿ, ಸಿಗರೇಟ್ ಮತ್ತು ಮಾಂಸಕ್ಕೆ ನಿಷೇಧವಿದೆ. ಆದರೂ ಕದ್ದುಮುಚ್ಚಿ ಈ ನಿಷೇಧಿತ ಪದಾರ್ಥಗಳನ್ನು ತಿರುಮಲ ಬೆಟ್ಟಕ್ಕೆ ಸಾಗಿಸಲಾಗುತ್ತಿದೆ.

ಅಲಿಪಿರಿಲಿ ತಪಾಸಣಾ ಚೌಕಿಯಲ್ಲಿ ಎರಡು ತಿಂಗಳ ಅವಧಿಯಲ್ಲಿ ಅಪಾರ ಪ್ರಮಾಣದ ಬೀಡಿ, ಸಿಗರೇಟ್ ಮತ್ತು ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.

ಭಕ್ತರು ಮತ್ತು ದೇವಸ್ಥಾನದ ನೌಕರ ವರ್ಗದವರು ಸಾಗುವ ಅಲಿಪಿರಿಲಿ ತಪಾಸಣಾ ಚೌಕಿಯಲ್ಲಿ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ.
 
ಮುಖ್ಯ ಜಾಗ್ರತ ಮತ್ತು ಭದ್ರತಾ ಅಧಿಕಾರಿ ಅಶೋಕ್ ಕುಮಾರ್ ಕಟ್ಟುನಿಟ್ಟಿನ ಕ್ರಮ ಆರಂಭಿಸಿ ತಪಾಸಣೆ ಯನ್ನು ಬಿಗಿಗೊಳಿಸಿರುವುದರಿಂದ ದೊಡ್ಡ ಪ್ರಮಾಣದಲ್ಲಿ ನಿಷೇಧಿತ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.