ADVERTISEMENT

ನೀಟ್‌ಗೆ ಆಧಾರ್‌ ಬೇಡ: ‘ಸುಪ್ರೀಂ’ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 19:59 IST
Last Updated 7 ಮಾರ್ಚ್ 2018, 19:59 IST
ನೀಟ್‌ಗೆ ಆಧಾರ್‌ ಬೇಡ: ‘ಸುಪ್ರೀಂ’ ಸೂಚನೆ
ನೀಟ್‌ಗೆ ಆಧಾರ್‌ ಬೇಡ: ‘ಸುಪ್ರೀಂ’ ಸೂಚನೆ   

ನವದೆಹಲಿ: ವೈದ್ಯಕೀಯ ಕೋರ್ಸ್‌ ಪ್ರವೇಶದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಬರೆಯುವ ವಿದ್ಯಾರ್ಥಿಗಳಿಗೆ ಆಧಾರ್‌ ಸಂಖ್ಯೆ ಕಡ್ಡಾಯ ಮಾಡದಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ. 

ನೀಟ್‌ಗೆ ನೋಂದಣಿ ಸಂದರ್ಭದಲ್ಲಿ ಆಧಾರ್‌ ಕಡ್ಡಾಯಗೊಳಿಸಿ ಸಿಬಿಎಸ್‌ಇ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿ ‘ಸುಪ್ರೀಂ’ ಈ ಸೂಚನೆ ನೀಡಿದೆ.

ನೀಟ್‌ ಅಥವಾ ಇತರ ಯಾವುದೇ ಪರೀಕ್ಷೆ ಬರೆಯುವವರು ಆಧಾರ್‌ಸಂಖ್ಯೆ ನೀಡುವುದು ಕಡ್ಡಾಯವಲ್ಲ ಎಂದು ಆಧಾರ್‌ಗೆ ಸಂಬಂಧಿಸಿದ ವಿವಿಧ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠದ ಮುಂದೆ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋ‍ಪಾಲ್‌ ಹೇಳಿಕೆ
ನೀಡಿದರು.

ADVERTISEMENT

‘ಪರೀಕ್ಷೆ ಬರೆಯಲು ಆಧಾರ್‌ ಕಡ್ಡಾಯವಲ್ಲ’ ಎಂಬ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಗೆ (ಸಿಬಿಎಸ್‌ಇ) ಸುಪ್ರೀಂ ನಿರ್ದೇಶಿಸಿದೆ.

2018ರ ನೀಟ್‌ ತೆಗೆದುಕೊಳ್ಳುವವರು ಆಧಾರ್‌ ಹೊಂದಿರಲೇಬೇಕು ಎಂಬ ನಿಯಮ ಮಾಡುವ ಅಧಿಕಾರವನ್ನು ಸಿಬಿಎಸ್‌ಇಗೆ ನೀಡಿಲ್ಲ ಎಂದು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರವು (ಯುಐಡಿಎಐ) ಪೀಠಕ್ಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.