ADVERTISEMENT

ನೀಟ್‌ ಫಲಿತಾಂಶ: ಗುಜರಾತ್‌ ವಿದ್ಯಾರ್ಥಿಗೆ ಪ್ರಥಮ ರ‍್ಯಾಂಕ್

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2016, 19:52 IST
Last Updated 16 ಆಗಸ್ಟ್ 2016, 19:52 IST
ನೀಟ್‌ ಫಲಿತಾಂಶ: ಗುಜರಾತ್‌ ವಿದ್ಯಾರ್ಥಿಗೆ ಪ್ರಥಮ ರ‍್ಯಾಂಕ್
ನೀಟ್‌ ಫಲಿತಾಂಶ: ಗುಜರಾತ್‌ ವಿದ್ಯಾರ್ಥಿಗೆ ಪ್ರಥಮ ರ‍್ಯಾಂಕ್   

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆದಿದ್ದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (ನೀಟ್‌) ಫಲಿತಾಂಶ ಮಂಗಳವಾರ ಪ್ರಕಟವಾ ಗಿದೆ.

ಗುಜರಾತ್‌ನ ಹೇತ್ ಷಾ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಷಾ ಅವರು 720ರಲ್ಲಿ 685 ಅಂಕ ಗಳಿಸಿದ್ದಾರೆ.

ಎರಡನೆಯ ರ‍್ಯಾಂಕ್ ಒಡಿಶಾದ ಏಕಾಂಶ್ ಗೋಯಲ್‌ ಅವರಿಗೆ (682 ಅಂಕ), ಮೂರನೆಯ ರ‍್ಯಾಂಕ್ ರಾಜಸ್ತಾನದ ನಿಖಿಲ್ ಬಜಿಯಾ ಅವರಿಗೆ (678 ಅಂಕ) ಸಿಕ್ಕಿದೆ.

ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಈ ಬಾರಿ ಎರಡು ಬಾರಿ ನೀಟ್‌ ಪರೀಕ್ಷೆ ನಡೆಸಿತ್ತು.

ಮೊದಲ ಬಾರಿ ನಡೆದ ಪರೀಕ್ಷೆಗೆ ಸುಮಾರು ಆರು ಲಕ್ಷ ವಿದ್ಯಾರ್ಥಿಗಳು, ಎರಡನೇ ಬಾರಿಯ ಪರೀಕ್ಷೆಗೆ 4.75 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.

ರಾಜ್ಯದ ವಿದ್ಯಾರ್ಥಿಗಳು:  ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ)ಯಲ್ಲಿ  ಬೆಂಗಳೂರಿನ ವಿದ್ಯಾರ್ಥಿಗಳಾದ ಎಂ.ಸೂರಜ್‌ 78 ಮತ್ತು ಸಂಜಯ್‌ ಎಸ್‌.ಗೌಡರ್‌ 122ನೇ ರ‍್ಯಾಂಕ್ ಪಡೆದಿದ್ದಾರೆ. ವಿವೇಕ್‌ ಭಟ್‌ ಅವರು 281ನೇ ರ‍್ಯಾಂಕ್ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.