ADVERTISEMENT

‘ನೀಟ್‌’ ತೇರ್ಗಡೆಯಾದ ನರೇಗಾ ಕೂಲಿಕಾರ್ಮಿಕನ ಪುತ್ರ

ಪಿಟಿಐ
Published 9 ಜೂನ್ 2018, 19:38 IST
Last Updated 9 ಜೂನ್ 2018, 19:38 IST
‘ನೀಟ್‌’ ತೇರ್ಗಡೆಯಾದ ನರೇಗಾ ಕೂಲಿಕಾರ್ಮಿಕನ ಪುತ್ರ
‘ನೀಟ್‌’ ತೇರ್ಗಡೆಯಾದ ನರೇಗಾ ಕೂಲಿಕಾರ್ಮಿಕನ ಪುತ್ರ   

ಕೋಟಾ, ರಾಜಸ್ಥಾನ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೇಗಾ) ಕೂಲಿಕಾರ್ಮಿಕ ದಂಪತಿ ಪುತ್ರ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ (ನೀಟ್‌) ಉತ್ತೀರ್ಣಾರಾಗುವ ಮೂಲಕ ಮಾದರಿಯಾಗಿದ್ದಾರೆ.

ಧೋಲ್ಪುರ ಜಿಲ್ಲೆಯ ಸಖ್ವಾರದ ಕ್ರಿಶನ್‌ಕುಮಾರ್‌ ಈ ಸಾಧನೆ ಮಾಡಿದ್ದಾರೆ. ಇವರ ತಂದೆ ಮುನ್ನಾ ಲಾಲ್‌ 5 ತರಗತಿವರೆಗೆ ಓದಿದ್ದರೆ, ತಾಯಿ ಅನಕ್ಷರಸ್ಥೆ. ‘ನಾವು ಜೀವನದಲ್ಲಿ ಅನುಭವಿಸಿದ ಕಷ್ಟ, ನೋವು ಆತನನ್ನು ಬಾಧಿಸಬಾರದು. ಅದರಿಂದ ಆತ ಹೊರ ಬರಬೇಕು ಎಂಬುದು ನಮ್ಮ ಆಸೆಯಾಗಿತ್ತು.

ನನ್ನ ಕನಸು ನನಸಾಗುತ್ತಿದೆ. ಪುತ್ರ ನನ್ನ ಗ್ರಾಮದ ಮೊದಲ ವೈದ್ಯನಾಗಲಿದ್ದಾನೆ’ ಎಂದು ಮುನ್ನಾಲಾಲ್‌ ಹರ್ಷ ವ್ಯಕ್ತಪಡಿಸಿದ್ದಾರೆ. ಸೀಮೆಎಣ್ಣೆ ದೀಪದ ಬೆಳಕಿನಲ್ಲಿಯೇ ಪ್ರಾಥಮಿಕ, ಪ್ರೌಢ ಶಿಕ್ಷಣ ಮುಗಿಸಿರುವ ಕ್ರಿಶನ್‌, 300 ಕಿ.ಮೀ. ದೂರದ ಕೋಟಾಕ್ಕೆ ತೆರಳಿ, ತರಬೇತಿ ಪಡೆದು ‘ನೀಟ್‌’ನಲ್ಲಿ ಯಶಸ್ಸು ಗಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.