
ಪ್ರಜಾವಾಣಿ ವಾರ್ತೆ ನವದೆಹಲಿ, (ಐಎಎನ್ಎಸ್): ತರಬೇತಿಗೆ ಬಳಸುತ್ತಿದ್ದ ಭಾರತೀಯ ವಾಯುದಳಕ್ಕೆ ಸೇರಿದ ಯುದ್ಧ ವಿಮಾನ ಮೀರಾಜ್-2000 ಜೆಟ್, ರಾಜಸ್ತಾನದಲ್ಲಿ ಸೋಮವಾರ ಅಪಘಾತಕ್ಕೊಳಗಾಗಿದ್ದು, ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಅಪಘಾತವು ಸೋಮವಾರ ಮಧ್ಯಾಹ್ನ 12.45ರ ಸುಮಾರಿಗೆ ನಡೆದಿದೆ. ಅದರ ಪೈಲಟ್ ಸುರಕ್ಷಿತವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ 10 ದಿನಗಳ ಅವಧಿಯಲ್ಲಿ ಈ ಮಿರಾಜ್ 2000 ಜೆಟ್ ಮಾದರಿಯ ಯುದ್ಧ ವಿಮಾನ ಎರಡನೇ ಬಾರಿ ಅಪಘಾತಕ್ಕೀಡಾಗಿದೆ.
ಈ ಹಿಂದೆ ಫೆ 24ರಂದು ಮಧ್ಯಪ್ರದೇಶದಲ್ಲಿ ತರಬೇತಿಗೆ ಬಳಸುತ್ತಿದ್ದ ಮಿರಾಜ್ 2000 ಜೆಟ್ ಯುಧ್ದ ವಿಮಾನವೊಂದು ಅಪಘಾತಕ್ಕೊಳಗಾಗಿತ್ತು. ಆಗಲೂ ಅದರಲ್ಲಿದ್ದ ಪೈಲಟ್ ಹಾಗೂ ಸೇನೆಯ ಹಿರಿಯ ಅಧಿಕಾರಿ ಹೊರಕ್ಕೆ ಜಿಗಿದು ತಮ್ಮ ಪ್ರಾಣ ಉಳಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.