
ನವದೆಹಲಿ: ನೋಟು ಚಲಾವಣೆ ರದ್ದತಿ ಕುರಿತು ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು, ಅವರಲ್ಲಿ ಶೇ 90 ರಷ್ಟು ಜನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ಸೂಚಿಸಿದ್ದಾರೆ. ದೇಶದ ಎಲ್ಲೆಡೆ ನಡೆದ ಸಮೀಕ್ಷೆಯಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಗಿದೆ.
ಬೆಂಗಳೂರು ಮೂಲದ ‘ವಾಯ್ಸ್‌ಬ್ಯಾಕ್ ಟೆಕ್ನಾಲಜೀಸ್’ ನವೆಂಬರ್ 15ರಿಂದ ನವೆಂಬರ್ 22ರವರೆಗೆ ಈ ಸಮೀಕ್ಷೆ ನಡೆಸಿದೆ.
ಎಸ್‌ಎಂಎಸ್ ಲಿಂಕ್ ಮೂಲಕ ಸಮೀಕ್ಷೆ ನಡೆಸಲಾಗಿದ್ದು, ಐದು ಪ್ರಶ್ನೆಗಳನ್ನು ಕೇಳಲಾಗಿತ್ತು. ನೋಟು ಚಲಾವಣೆ ರದ್ದತಿಯ ಬೇರೆ ಬೇರೆ ಪರಿಣಾಮಗಳ ಬಗ್ಗೆ ಜನರಿಗೆ ಅರಿವಾದ ನಂತರ ಸಮೀಕ್ಷೆ ನಡೆಸಿದರೆ, ಜನರ ಪ್ರತಿಕ್ರಿಯೆ ಬದಲಾಗಬಹುದು ಎಂದು ಊಹಿಸಲಾಗಿತ್ತು. ಹೀಗಾಗಿ ರದ್ದತಿ ಕ್ರಮ ಜಾರಿಯಾದ ಒಂದು ವಾರದ ನಂತರ ಸಮೀಕ್ಷೆ ಆರಂಭಿಸಲಾಗಿತ್ತು.
ಭಾರತದಲ್ಲಿ ಡಿಜಿಟಲ್ ಮಾಧ್ಯಮದ ಮೂಲಕ ನಡೆದ ಸಮೀಕ್ಷೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು ಇದೇ ಮೊದಲು ಎಂದು ಸಂಸ್ಥೆ ಹೇಳಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.