ADVERTISEMENT

ನೌಕಾಪಡೆಯಿಂದ 20 ಮಂದಿ ರಕ್ಷಣೆ

ಅರಬ್ಬಿ ಸಮುದ್ರದಲ್ಲಿ ಮುಳುಗಿದ ಸರಕು ಸಾಗಾಣಿಕೆ ಹಡಗು

​ಪ್ರಜಾವಾಣಿ ವಾರ್ತೆ
Published 22 ಜೂನ್ 2015, 6:10 IST
Last Updated 22 ಜೂನ್ 2015, 6:10 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಮುಂಬೈ (ಪಿಟಿಐ): ಮುಂಬೈ ಬಂದರಿಂದ 40 ನಾಟಿಕಲ್‌ ಮೈಲ್ಸ್‌ ದೂರದ ಅರಬ್ಬಿ ಸಮುದ್ರದಲ್ಲಿ ಮುಳುಗುತ್ತಿದ್ದ ಸರಕು ಸಾಗಾಣಿಕೆ ಹಡಗೊಂದರಿಂದ ಭಾರತೀಯ ನೌಕಾಪಡೆ ಸಿಬ್ಬಂದಿ ಕೊನೆಯ ಕ್ಷಣದಲ್ಲಿ ಚುರುಕಿನ ಕಾರ್ಯಾಚರಣೆ ನಡೆಸಿ ಪವಾಡ ಸದೃಶ್ಯ ರೀತಿಯಲ್ಲಿ 20 ಮಂದಿಯನ್ನು ರಕ್ಷಿಸಿದ್ದಾರೆ.

‘ಜಿಂದಾಲ್‌ ಕಾಮಾಕ್ಷಿ’ ಹೆಸರಿನ ಈ ಹಡಗು ಪಲ್‌ಘರ್‌ ಜಿಲ್ಲೆಯ ಸಮೀಪ ಅರಬ್ಬಿ ಸಮುದ್ರದಲ್ಲಿ ಮುಳುಗುತ್ತಿರುವ ಕುರಿತು ಭಾನುವಾರ ತಡರಾತ್ರಿ ಸೂಚನೆ ಬಂತು. ತಕ್ಷಣವೇ ರಕ್ಷಣೆಗೆ  ಧಾವಿಸಿದೆವು. ಸೋಮವಾರ ಬೆಳಗಿನ ಜಾವ 20 ಮಂದಿಯನ್ನು ಹೆಲಿಕಾಫ್ಟರ್‌ ಮೂಲಕ ಸುರಕ್ಷಿತವಾಗಿ ಮೇಲೆತ್ತಲಾಯಿತು. ಸ್ವಲ್ಪ ತಡವಾಗಿದ್ದರೂ ಇವರೆಲ್ಲರು ಹಡಗಿನ ಜತೆಗೆ ಜಲಸಮಾಧಿಯಾಗುತ್ತಿದ್ದರು’ ಎಂದು ರಕ್ಷಣಾ ಸಚಿವಾಲಯದ ವಕ್ತಾರರೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಸರಕು ತುಂಬಿಕೊಂಡ ಈ ಹಡಗು ವಸಾಯಿ ಕರಾವಳಿಯಿಂದ ಮುಂಬೈ ಬಂದರಿಗೆ ಬರುತ್ತಿತ್ತು. ಹಡಗು ಮುಳುಗಲು ಕಾರಣವೇನು ಎನ್ನುವುದು ಇದುವರೆಗೂ ಖಚಿತಗೊಂಡಿಲ್ಲ.  ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT