ADVERTISEMENT

ಪಕ್ಷೇತರರ ಬೆಂಬಲ

​ಪ್ರಜಾವಾಣಿ ವಾರ್ತೆ
Published 17 ಜೂನ್ 2013, 19:59 IST
Last Updated 17 ಜೂನ್ 2013, 19:59 IST

ಚೆನ್ನೈ (ಪಿಟಿಐ): ನಾಲ್ವರು ಪಕ್ಷೇತರ ಶಾಸಕರು ಜೆಡಿ (ಯು) ಸಭೆಯಲ್ಲಿ ಪಾಲ್ಗೊಳ್ಳಲು ಬಯಸಿರುವುದರಿಂದ ಬಿಜೆಪಿ ಸಖ್ಯ ತೊರೆದರೂ ನಿತೀಶ್ ಕುಮಾರ್ ಸರ್ಕಾರವು ವಿಶ್ವಾಸ ಗೊತ್ತುವಳಿಯಲ್ಲಿ ಪಾರಾಗಲು ಬೇಕಾದ `ಜಾದೂ ಸಂಖ್ಯೆ'ಯನ್ನು ಹೊಂದಲು ಯಶಸ್ವಿಯಾಗುವ ಸೂಚನೆಗಳು ಕಂಡುಬಂದಿವೆ.

ಪಕ್ಷೇತರ ಶಾಸಕರಾದ ವಿನಯ್ ಬಿಹಾರಿ, ಪವನ್ ಕುಮಾರ್ ಜೈಸ್ವಾಲ್, ದುಲಾಲ್‌ಚಂದ್ ಗೋಸ್ವಾಮಿ ಮತ್ತು ಸೋಮಪ್ರಕಾಶ್ ಸಿಂಗ್ ಅವರು ಸೋಮವಾರ ಜೆಡಿಯು ಮುಖಂಡರಿಗೆ ಸೇರಿದ ಕಾರಿನಲ್ಲಿ ನಿತೀಶ್ ಕುಮಾರ್ ನಿವಾಸಕ್ಕೆ ತೆರಳಿದರು. ಜೆಡಿಯು ಅಧ್ಯಕ್ಷ ಶರದ್ ಯಾದವ್ ಸಹ ಅಲ್ಲಿಯೇ ಇದ್ದರು.

ಪಕ್ಷೇತರ ಶಾಸಕರಾದ ಜ್ಯೋತಿರಶ್ಮಿ ಸಭೆಗೆ ಹಾಜರಾಗಿಲ್ಲ. ಮತ್ತೊಬ್ಬ ಪಕ್ಷೇತರ ಶಾಸಕ ದಿಲಿಪ್ ವರ್ಮಾ ಈಗಾಗಲೇ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.