ADVERTISEMENT

ಪಠಾಣ್‌ಕೋಟ್‌: ನಾಲೆಯಲ್ಲಿ ಅಡಗಿಸಿಟ್ಟಿದ್ದ ಮದ್ದುಗುಂಡು ಪತ್ತೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2016, 11:58 IST
Last Updated 31 ಜನವರಿ 2016, 11:58 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಪಠಾಣ್‌ ಕೋಟ್‌(ಪಿಟಿಐ): ಪಠಾಣ್‌ಕೋಟ್‌ ವಾಯು ನೆಲೆ ಮೇಲೆ ಉಗ್ರರು ದಾಳಿ ನಡೆಸಿದ ತಿಂಗಳ ಬಳಿಕ ಜಿಲ್ಲೆಯ ಮಲಿಕ್‌ಪುರದ ನಾಲೆಯಲ್ಲಿ ಅಡಗಿಸಿಟ್ಟಿದ್ದ ಮುದ್ದುಗುಂಡುಗಳು ಭಾನುವಾರ ಪತ್ತೆಯಾಗಿವೆ.

ಇಲ್ಲಿನ ಅಪ್ಪರ್ ಬಾರಿ ಡೊಬಿ ನಾಲೆಯಲ್ಲಿ ಐವರು ಬಾಲಕರು ಸ್ನಾನ ಮಾಡುವ ವೇಳೆ ಆಕಸ್ಮಿಕವಾಗಿ ಮದ್ದುಗುಂಡುಗಳನ್ನು ನೋಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲೆಯಲ್ಲಿ ನೀರಿನ ಹರಿವು ಕಡಿಮೆ ಇದ್ದು, ನಾಲೆಯ ತಳದಲ್ಲಿದ್ದ ಮದ್ದುಗುಂಡುಗಳನ್ನು ಬಾಲಕರು ನೋಡಿದ್ದಾರೆ. ನೋಡುತ್ತಿದ್ದಂತೆ ಅವರು ಕೂಗಿಕೊಂಡಿದ್ದಾರೆ ಎಂದು ಪಠಾಣ್‌ಕೋಟ್‌ನ ಗ್ರಾಮೀಣ ವಿಭಾಗದ ಡಿಎಸ್‌ಪಿ ಕುಲ್‌ದೀಪ್ ಸಿಂಗ್ ತಿಳಿಸಿದ್ದಾರೆ.

59 ಸುತ್ತು ಗುಂಡುಗಳನ್ನೊಳಗೊಂಡ ಎಕೆ–47 ರೈಫಲ್‌ನ ಎರಡು ಮ್ಯಾಗಜೀನ್, 29 ಸುತ್ತು ಗುಂಡುಗಳನ್ನೊಳಗೊಂಡ ಐಎನ್‌ಎಸ್‌ಎಎಸ್‌ ರೈಫಲ್‌ನ ಎರಡು ಮ್ಯಾಗಜೀನ್, .315 ರೈಫಲ್‌ನ 16 ಸುತ್ತು ಗುಂಡುಗಳು ಹಾಗೂ ಎರಡು ಬಾಂಬುಗಳನ್ನು ಅಡಗಿಸಿಟ್ಟಿದ ಸ್ಥಳದಿಂದ ವಶಕ್ಕೆ ಪಡೆಯಲಾಗಿದೆ. ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.