ADVERTISEMENT

ಪತ್ರಕರ್ತನ ಹತ್ಯೆ: ಸಿಬಿಐ ತನಿಖೆಗೆ ಶಿಫಾರಸು

ಪಿಟಿಐ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST

ಭೋಪಾಲ್‌/ಭಿಂಡ್‌: ಖಾಸಗಿ ವಾಹಿನಿಯ ಪತ್ರಕರ್ತನ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡುವುದಾಗಿ ಮಧ್ಯಪ್ರದೇಶ ಸರ್ಕಾರ ತಿಳಿಸಿದೆ.

ಮರಳು ಗಣಿಗಾರಿಕೆ ಅಕ್ರಮ ಕುರಿತು ಮಾರುವೇಷದ ಕಾರ್ಯಾಚರಣೆ ನಡೆಸಿ ವರದಿ ಮಾಡಿದ್ದ ಭಿಂಡ್‌ನ ವರದಿಗಾರ ಸಂದೀಪ್‌ ಶರ್ಮಾ ಅವರ ಮೇಲೆ ಸೋಮವಾರ ಲಾರಿ ಹರಿದ ಪರಿಣಾಮ ಮೃತಪಟ್ಟಿದ್ದರು. ಲಾರಿ ಚಾಲಕನನ್ನು ಅದೇ ದಿನ ರಾತ್ರಿ ಬಂಧಿಸಲಾಗಿದೆ.‌

‘ಅಫಘಾತದ ಬಳಿಕ ಪರಾರಿಯಾಗಿದ್ದ ಲಾರಿ ಚಾಲಕ ರನ್ವೀರ್‌ ಯಾದವ್‌ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಚಾಲಕನ ವಿರುದ್ಧ ಐಪಿಸಿ ಸೆಕ್ಷನ್‌ 304 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಭೀಂಡ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಶಾಂತ್‌ ಖರೆ ತಿಳಿಸಿದ್ದಾರೆ.

ADVERTISEMENT

ಮಾರುವೇಷದ ಕಾರ್ಯಾಚರಣೆ ಬಳಿಕ ತಮಗೆ ಜೀವ ಬೆದರಿಕೆ ಇದೆ ಎಂದು ಜಿಲ್ಲಾಡಳಿತಕ್ಕೆ ಹಾಗೂ ಮಧ್ಯಪ್ರದೇಶದ ಪೊಲೀಸ್‌ ಮಹಾನಿರ್ದೇಶಕರು ಮತ್ತು ಮಾನವಹಕ್ಕುಗಳ ಆಯೋಗಕ್ಕೆ ಈಚೆಗೆ ಸಂದೀಪ್‌ ದೂರು ನೀಡಿದ್ದರು.  ಶರ್ಮಾ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕಾಂಗ್ರೆಸ್‌ ಆಗ್ರಹಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.