ADVERTISEMENT

ಪರ್ರೀಕರ್ ಮತ್ತೆ ಆಸ್ಪತ್ರೆಗೆ ದಾಖಲು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2018, 19:23 IST
Last Updated 25 ಫೆಬ್ರುವರಿ 2018, 19:23 IST
ಪರ್ರೀಕರ್ ಮತ್ತೆ ಆಸ್ಪತ್ರೆಗೆ ದಾಖಲು
ಪರ್ರೀಕರ್ ಮತ್ತೆ ಆಸ್ಪತ್ರೆಗೆ ದಾಖಲು   

ಪಣಜಿ: ಮುಖ್ಯಮಂತ್ರಿ ಮನೋಹರ್‌ ಪರ್ರೀಕರ್‌ ಅವರು ಭಾನುವಾರ ಮತ್ತೆ ಅಸೌಖ್ಯ ಮತ್ತು ಹೊಟ್ಟೆನೋವಿನಿಂದ ಸ್ಥಳೀಯ ಗೋವಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದಾರೆ.

62 ವರ್ಷದ ಪರ್ರೀಕರ್‌ ಅವರು ಇತ್ತೀಚೆಗೆ ಅನಾರೋಗ್ಯದಿಂದ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದರು. ಗೋವಾ ಸರ್ಕಾರದ ಬಜೆಟ್‌ ಮಂಡನೆಗಾಗಿ ಇತ್ತೀಚೆಗೆ ಅವರು ಆಸ್ಪತ್ರೆಯಿಂದ ಮರಳಿದ್ದರು.

ಪರ್ರೀಕರ್‌ ಅವರ ಆರೋಗ್ಯದ ಬಗ್ಗೆ ವಿಶೇಷ ವೈದ್ಯರು ತೀವ್ರ ನಿಗಾ ವಹಿಸಿದ್ದಾರೆ ಎಂದು ಆರೋಗ್ಯ ಸಚಿವ ವಿಶ್ವಜಿತ್‌ ರಾಣೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.