
ಪ್ರಜಾವಾಣಿ ವಾರ್ತೆಮುಂಬೈ(ಪಿಟಿಐ): ಪ್ರತಿಕೂಲ ಹವಾಮಾನದ ಕಾರಣದಿಂದ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರ ಹೆಲಿಕಾಪ್ಟರ್ ಅನ್ನು ಭಾನುವಾರ ಬೀಡ್ ಜಿಲ್ಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು.
‘ಎನ್‌ಸಿಪಿ ಮುಖ್ಯಸ್ಥ ಪವಾರ್ ಅವರು ರಾಜಕೀಯ ಸಭೆಯಲ್ಲಿ ಭಾಗವಹಿಸಲು ಉಸ್ಮಾನಾಬಾದ್‌ನಿಂದ ಪರ್ಭಾನಿಗೆ ತೆರಳುತ್ತಿದ್ದರು. ಆದರೆ ಪ್ರತಿಕೂಲಹವಾಮಾನದ ಕಾರಣದಿಂದ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅನ್ನು ಬೀಡ್ ಜಿಲ್ಲೆಯ ಅಂಬೆಜೋಗೈನ ಎಸ್‌ಆರ್‌ಟಿ ವೈದ್ಯಕೀಯ ಕಾಲೇಜಿನಮೈದಾನದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.