ADVERTISEMENT

ಪಿಂಚಣಿ ಅರ್ಜಿಯಲ್ಲಿ ಸೆಲ್ಫಿ ಚಿತ್ರ ಬೇಡ!

ಪಿಟಿಐ
Published 14 ಮೇ 2018, 19:30 IST
Last Updated 14 ಮೇ 2018, 19:30 IST
ಪಿಂಚಣಿ ಅರ್ಜಿಯಲ್ಲಿ ಸೆಲ್ಫಿ ಚಿತ್ರ ಬೇಡ!
ಪಿಂಚಣಿ ಅರ್ಜಿಯಲ್ಲಿ ಸೆಲ್ಫಿ ಚಿತ್ರ ಬೇಡ!   

ನವದೆಹಲಿ: ಪಿಂಚಣಿ ಅರ್ಜಿಯ ಭಾವಚಿತ್ರಗಳಿಗೆ ಸೆಲ್ಫಿ ಚಿತ್ರಗಳನ್ನು ಪರಿಗಣಿಸುವುದಿಲ್ಲ ಎಂದು ಕೇಂದ್ರ ಸರ್ಕಾರದ ನಿವೃತ್ತಿ ಅಂಚಿನಲ್ಲಿರುವ ನೌಕರರಿಗೆ ಸಿಬ್ಬಂದಿ ಸಚಿವಾಲಯ ತಿಳಿಸಿದೆ.

ಕಪ್ಪು ಬಿಳುಪಿನ ಚಿತ್ರ, ಕಪ್ಪು ಕನ್ನಡಕ ಧರಿಸಿರುವ ಚಿತ್ರ, ಕಣ್ಣನ್ನು ಮರೆಯಾಗಿಸುವ ಉದ್ದದ ಕೂದಲು ಇರುವ ಭಾವಚಿತ್ರಗಳನ್ನೂ ತಿರಸ್ಕರಿಸುವುದಾಗಿ ತಿಳಿಸಿರುವ ಸಚಿವಾಲಯವು, ಈ ಸಂಬಂಧ ನಿಯಮಾವಳಿಗಳನ್ನು ರೂಪಿಸಿದೆ.

ಸಹಿಯು ನಿರ್ದಿಷ್ಟ ಅಳತೆ ಹೊಂದಿರಬೇಕು. ಭಾವಚಿತ್ರದ ಮೇಲೆ ಸಹಿ ಮಾಡುವಂತಿಲ್ಲ. ಉದ್ಯೋಗಿಯು ನಿವೃತ್ತಿಯಾಗುವ ಎಂಟು ತಿಂಗಳ ಮೊದಲು ಅರ್ಜಿ ಪಡೆದು ಸೂಕ್ತ ಮಾಹಿತಿಯನ್ನು ಭರ್ತಿ ಮಾಡುವಂತೆ ನಿರ್ದೇಶಿಸಲಾಗಿದೆ.

ADVERTISEMENT

ನಿವೃತ್ತಿಯಾದವರು ಪಿಂಚಣಿಗಾಗಿ ಹೆಚ್ಚು ಸಮಯ ಕಾಯುವುದನ್ನು ತಪ್ಪಿಸಲು ಇವನ್ನು ರೂಪಿಸಲಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.