
ಪ್ರಜಾವಾಣಿ ವಾರ್ತೆನವದೆಹಲಿ (ಪಿಟಿಐ): ತನ್ನ ಕಾರ್ಯಕ್ರಮಗಳ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಜನರನ್ನು ತಲುಪಲು ಮುಂದಾಗಿರುವ ಕೇಂದ್ರ ಸರ್ಕಾರ ಇದೀಗ ವಿಡಿಯೊ ದೃಶ್ಯಗಳ ವೆಬ್‌ಸೈಟ್ ಯುಟ್ಯೂಬ್ ಮೂಲಕವೂ ಜನರಿಗೆ ಹತ್ತಿರವಾಗಲು ನಿರ್ಧರಿಸಿದೆ.
ಇನ್ನು ಮುಂದೆ ದೃಶ್ಯಗಳ ಮೂಲಕ ಜನರೊಡನೆ ಸಂವಹನ ಮಾಡಲು ಆದ್ಯತೆ ನೀಡುವುದಾಗಿ ಪ್ರಧಾನಿ ಸಚಿವಾಲಯ ಸ್ಪಷ್ಟಪಡಿಸಿದೆ. ಮೊದಲ ಹೆಜ್ಜೆಯಾಗಿ, ಎಂಜಿಎನ್‌ಆರ್‌ಇಜಿಎ ಶನಿವಾರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಪ್ರಧಾನಿ ಮನಮೋಹನ್ ಮಾಡಿದ ಭಾಷಣದ ಚಿತ್ರೀಕರಣವನ್ನು ಮೊದಲ ಬಾರಿಗೆ ಯುಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.