ನವದೆಹಲಿ: ಖ್ಯಾತ ಕಾಂಗ್ರೆಸ್ ರಾಜಕಾರಣಿ ಎನ್.ಡಿ. ತಿವಾರಿ ಅವರು ಪಿತೃತ್ವ ವಿವಾದದಲ್ಲಿ ಕಡೆಗೂ ಸೋಲು ಅನುಭವಿಸಿದ್ದಾರೆ. ತಿವಾರಿ ಅವರು ರೋಹಿತ್ ಶೇಖರ್ ಅವರ ತಂದೆ ಎಂಬುದಾಗಿ ದೆಹಲಿ ಹೈಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.
ಶೇಖರ್ ಅವರ ಕೋರಿಕೆ ಮೇರೆಗೆ ನಡೆದ ಡಿಎನ್ಎ ಪರೀಕ್ಷೆಯ ವರದಿಯನ್ನು ಅನುಸರಿಸಿ ನ್ಯಾಯಾಲಯ ಈ ತೀರ್ಪು ನೀಡಿತು.
ಡಿಎನ್ ಎ ಪರೀಕ್ಷೆಗೆ ತಿವಾರಿ ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು. ಆದರೆ ನ್ಯಾಯಾಲಯದ ಆದೇಶದ ಮೇರೆಗೆ ತಿವಾರಿ ಅವರ ಡಿಎನ್ ಎ ಪರೀಕ್ಷೆ ನಡೆದು ವರದಿಯನ್ನು ಮೊಹರಾದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ನೀಡಲಾಗಿತ್ತು.
ಈ ಲಕೋಟೆಯನ್ನು ನ್ಯಾಯಾಲಯದಲ್ಲಿ ಬಹಿರಂಗವಾಗಿ ತೆರೆದು ಓದಬಾರದು ಎಂದು ತಿವಾರಿ ನ್ಯಾಯಾಲಯಕ್ಕೆ ಮಾಡಿದ್ದ ಮನವಿಯನ್ನು ಶುಕ್ರವಾರ ಬೆಳಗ್ಗೆ ದೆಹಲಿ ನ್ಯಾಯಾಲಯ ತಿರಸ್ಕರಿಸಿತ್ತು.
ತಾನು ಎನ್ ಡಿ ತಿವಾರಿ ಅವರ ಪುತ್ರ ಎಂಬುದಾಗಿ ಪ್ರತಿಪಾದಿಸಿದ್ದ ಶೇಖರ್ ಪಟ್ಟು ಹಿಡಿದು ತಿವಾರಿ ಅವರ ಡಿಎನ್ಎ ಪರೀಕ್ಷೆ ನಡೆಯಬೇಕು ಎಂದು ಕೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.