ADVERTISEMENT

ಪಿಪಿಎಫ್, ಅಂಚೆ ಕಚೇರಿ ಠೇವಣಿಗೂ ಆಧಾರ್‌ ಕಡ್ಡಾಯ: ಕೇಂದ್ರ ಸರ್ಕಾರ

ಪಿಟಿಐ
Published 6 ಅಕ್ಟೋಬರ್ 2017, 11:13 IST
Last Updated 6 ಅಕ್ಟೋಬರ್ 2017, 11:13 IST
ಪಿಪಿಎಫ್, ಅಂಚೆ ಕಚೇರಿ ಠೇವಣಿಗೂ ಆಧಾರ್‌ ಕಡ್ಡಾಯ: ಕೇಂದ್ರ ಸರ್ಕಾರ
ಪಿಪಿಎಫ್, ಅಂಚೆ ಕಚೇರಿ ಠೇವಣಿಗೂ ಆಧಾರ್‌ ಕಡ್ಡಾಯ: ಕೇಂದ್ರ ಸರ್ಕಾರ   

ನವದೆಹಲಿ: ಅಂಚೆ ಕಚೇರಿ ಠೇವಣಿ ಮತ್ತು ಪಿಪಿಎಫ್ (ಸಾರ್ವಜನಿಕ ಭವಿಷ್ಯ ನಿಧಿ)ಗೂ ಆಧಾರ್ ಜೋಡಣೆ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯ ವಿಶೇಷ ಗೆಜೆಟ್‌ ಅಧಿಸೂಚನೆ ಹೊರಡಿಸಿ ಪಿಪಿಎಫ್‌ಗೆ ಆಧಾರ್ ಕಡ್ಡಾಯ ಮಾಡಿದೆ.

2017ರ ಡಿಸೆಂಬರ್‌ 31ರೊಳಗೆ ಅಂಚೆ ಕಚೇರಿಗಳಲ್ಲಿ ಠೇವಣಿ ಇರಿಸಿರುವವರು ಮತ್ತು ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್‌) ಹೊಂದಿರುವವರು ಕಡ್ಡಾಯವಾಗಿ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡಬೇಕು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

ADVERTISEMENT

ಪಿಪಿಎಫ್‌, ಅಂಚೆ ಕಚೇರಿ ಠೇವಣಿ ಮಾತ್ರವಲ್ಲದೆ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ ಮತ್ತು ಕಿಸಾನ್ ವಿಕಾಸ್ ಪತ್ರಕ್ಕೂ ಆಧಾರ್‌ ಜೋಡಣೆ ಕಡ್ಡಾಯವಾಗಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರಿ ಸೇವೆಗಳಿಗೆ ಆಧಾರ್ ಕಡ್ಡಾಯ ಕುರಿತ ಪ್ರಕರಣ ವಿಚಾರಣೆ ಹಂತದಲ್ಲಿ ಇರುವಾಗಲೇ ಕೇಂದ್ರ ಸರ್ಕಾರ ಈ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.