ADVERTISEMENT

ಪುಣೆಯಲ್ಲಿ ಸರಣಿ ಸ್ಪೋಟ, ಒಬ್ಬ ವ್ಯಕ್ತಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 16:35 IST
Last Updated 1 ಆಗಸ್ಟ್ 2012, 16:35 IST

ಪುಣೆ (ಪಿಟಿಐ): ಪುಣೆ ನಗರಿಯಲ್ಲಿ ಬುಧವಾರ ಸಂಜೆ 4 ಕಡೆ ಕಡಿಮೆ ತೀವ್ರತೆಯ ಸರಣಿ ಸ್ಪೋಟಗಳು ಸಂಭವಿಸಿದ್ದು, ಒಬ್ಬ ವ್ಯಕ್ತಿಗೆ ಗಾಯವಾಗಿದೆ.

ಇಲ್ಲಿನ ಜನನಿಬಿಡ ಜಂಗ್ಲಿ ಮಹಾರಾಜ ರಸ್ತೆಯಲ್ಲಿ ಒಟ್ಟು 4 ಕಡೆ ಸರಣಿ ಸ್ಪೋಟಗಳು ಸಂಭವಿಸಿವೆ. ಆದರೆ ಇವು ಕಡಿಮೆ ತೀವ್ರತೆಯವು ಎಂದು ವರದಿಗಳು ತಿಳಿಸಿವೆ.

ಒಬ್ಬ ವ್ಯಕ್ತಿಗೆ ಮಾತ್ರ ಗಾಯಗಳಾದ ಬಗ್ಗೆ ವರದಿಯಾಗಿದೆ. ಸ್ಥಳಕ್ಕೆ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ಪಡೆ ಹಾಗೂ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

ಇದೊಂದು ಭಯೋತ್ಪಾದನಾ ಕೃತ್ಯ ಎಂಬ ಶಂಕೆ ಮೂಡಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT