ನವದೆಹಲಿ (ಪಿಟಿಐ): ಪೆಟ್ರೋಲ್ ದರವನ್ನು ಲೀಟರ್ಗೆ ರೂ 1.63 ಹೆಚ್ಚಿಸಲಾಗಿದೆ. ಹೊಸ ದರ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.
ಈ ದರವು ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ಹೊರತುಪಡಿಸಿದ್ದು, ಗ್ರಾಹಕರನ್ನು ತಲುಪುವಾಗ ಇವುಗಳನ್ನು ಸೇರಿಸಿ ಇನ್ನೂ ಹೆಚ್ಚಳವಾಗಲಿದೆ. ಕಳೆದ ಜೂನ್ನಿಂದ ಸತತ ಏಳನೇ ದರ ಏರಿಕೆ ಇದಾಗಿದೆ.
ತೈಲ ಬೆಲೆ ಏರಿಕೆ ಮತ್ತು ರೂಪಾಯಿ ಮೌಲ್ಯ ಕುಸಿತದ ಹಿನ್ನೆಲೆಯಲ್ಲಿ ದರ ಏರಿಕೆ ನಿರ್ಧಾರ ಮಾಡಲಾಗಿದೆ ಎಂದು ತೈಲ ಸಂಸ್ಥೆಗಳು ತಿಳಿಸಿವೆ. ಈ ಮಧ್ಯೆ, ಶೀಘ್ರವೇ ಡೀಸೆಲ್ ದರ ಲೀಟರ್ಗೆ ರೂ 35, ಸೀಮೆಎಣ್ಣೆ ಲೀಟರ್ಗೆ ರೂ 2 ಹಾಗೂ ಎಲ್ಪಿಜಿ ಸಿಲಿಂಡರ್ಗೆ ರೂ 50 ಏರಿಕೆಯಾಗುವ ನಿರೀಕ್ಷೆಯಿದೆ.
ರೂಪಾಯಿ ಮೌಲ್ಯ ಕುಸಿತ ಮತ್ತು ತೈಲ ಬೆಲೆ ಏರಿಕೆಯ ಕಾರಣ ಸರ್ಕಾರಕ್ಕೆ ದಾಖಲೆಯ ರೂ 1,80,000 ಕೋಟಿ ನಷ್ಟವಾಗಿರುವುದನ್ನು ಸರಿದೂಗಿಸಲು ತೈಲ ಸಚಿವಾಲಯ ಮಾರ್ಗೋಪಾಯ ಹುಡುಕುತ್ತಿರುವ ಹಿನ್ನೆಲೆಯಲ್ಲಿ ಈ ಹೆಚ್ಚಳ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.