ADVERTISEMENT

ಪ್ರಣವ್ ವಿರುದ್ಧ ನಾಳೆ ಸಂಗ್ಮಾ ದೂರು

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 19:30 IST
Last Updated 5 ಜುಲೈ 2012, 19:30 IST

ನವದೆಹಲಿ (ಐಎಎನ್‌ಎಸ್): ಯುಪಿಎ ರಾಷ್ಟ್ರಪತಿ ಅಭ್ಯರ್ಥಿ ಪ್ರಣವ್ ಮುಖರ್ಜಿ ಸ್ಪರ್ಧೆ ವಿರುದ್ಧ ಎನ್‌ಡಿಎ  ಅಭ್ಯರ್ಥಿ ಪಿ.ಎ. ಸಂಗ್ಮಾ ಶನಿವಾರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿದ್ದಾರೆ.

ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ನಿವಾಸದಲ್ಲಿ ಗುರುವಾರ ನಡೆದ ಸುದೀರ್ಘ ಸಭೆಯ ನಂತರ ಸಂಗ್ಮಾ ತಂಡ ಈ ನಿರ್ಧಾರಕ್ಕೆ ಬಂದಿದ್ದು ಈ ಸಂಬಂಧ ಕೋರ್ಟ್ ಕಟ್ಟೆಯನ್ನೂ ಹತ್ತಬಹುದು ಎಂಬ ಸುಳಿವು ನೀಡಿದೆ. ಪ್ರಣವ್ ಅಭ್ಯರ್ಥಿತನವನ್ನು ಮಾನ್ಯ ಮಾಡಿದ ಚುನಾವಣಾ ಅಧಿಕಾರಿ ವಿ.ಕೆ. ಅಗ್ನಿಹೋತ್ರಿ ಅವರನ್ನು ಭೇಟಿ ಮಾಡಿ ಈ ಸಂಬಂಧ ತೆಗೆದುಕೊಂಡ ನಿರ್ಧಾರ ಮರುಪರಿಶೀಲಿಸಲು ಕೋರಲಾಗುವುದು.

ಸಂವಿಧಾನದ 324ನೇ ಕಲಂ ಅನ್ವಯ ಅಭ್ಯರ್ಥಿಯ ಸ್ಪರ್ಧೆಗೆ ಚುನಾವಣಾಧಿಕಾರಿ ತೆಗೆದುಕೊಂಡ ನಿರ್ಧಾರವನ್ನು ಆಯೋಗ ಮರುಪರಿಶೀಲಿಸಬಹುದಾಗಿದೆ ಎಂದು ಬಿಜೆಪಿ ಮುಖಂಡ ಎಸ್.ಎಸ್. ಅಹ್ಲುವಾಲಿಯಾ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.