ADVERTISEMENT

‘ಪ್ರಣವ್‌ ಸಕ್ರಿಯ ರಾಜಕಾರಣಕ್ಕೆ ಇಲ್ಲ’

‘ಪ್ರಣವ್‌ಗೆ ಚುಕ್ಕಾಣಿ: ಆರ್‌ಎಸ್‌ಎಸ್‌ ತಂತ್ರ’

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 4:20 IST
Last Updated 11 ಜೂನ್ 2018, 4:20 IST

ನವದೆಹಲಿ: ಬಿಜೆಪಿಗೆ 2019ರ ಲೋಕಸಭಾ ಚುನಾವಣೆಯಲ್ಲಿ ಅಗತ್ಯ ಬಹುಮತ ಲಭಿಸದಿದ್ದರೆ ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿಸಲು ಬಿಜೆಪಿ ಚಿಂತಿಸಿದೆ ಎನ್ನುವ ವರದಿಗಳನ್ನು ಅವರ ಮಗಳು ಶರ್ಮಿಷ್ಠಾ ಮುಖರ್ಜಿ ತಳ್ಳಿಹಾಕಿದ್ದಾರೆ.

ಶಿವಸೇನಾ ಮುಖಂಡ ಸಂಜಯ್‌ ರಾವತ್‌ ಹೇಳಿಕೆ ಆಧರಿಸಿ ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಪ್ರಕಟವಾಗಿರುವ ಸಂಪಾದಕೀಯಕ್ಕೆ ಶರ್ಮಿಷ್ಠಾ ಈ ಪ್ರತಿಕ್ರಿಯೆ ನೀಡಿದ್ದಾರೆ.

‘ಪ್ರಸ್ತುತ ಸಂದರ್ಭ ನೋಡಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯುವ ಸಾಧ್ಯತೆ ಕಡಿಮೆ ಇದೆ. ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೇರಲು ವಿಫಲವಾದರೆ, ಅತಂತ್ರ ಸಂಸತ್‌ ನಿರ್ಮಾಣವಾದರೆ ಸಮ್ಮಿಶ್ರ ಸರ್ಕಾರ ನಡೆಸಲು ಮೋದಿಯವರಿಗೆ ಸಾಧ್ಯವಾಗುವುದಿಲ್ಲ. ಆಗ ಪ್ರಧಾನಿ ಅಭ್ಯರ್ಥಿಯಾಗಿ ಪ್ರಣವ್‌ ಅವರನ್ನು ಮುನ್ನೆಲೆಗೆ ತರಲು ಆರ್‌ಎಸ್‌ಎಸ್‌ ಈಗಿನಿಂದಲೇ ತಂತ್ರ ಹೆಣೆಯುತ್ತಿದೆ’ ಎಂದು ಸಾಮ್ನಾದ ಸಂಪಾದಕೀಯದಲ್ಲಿ ಬರೆಯಲಾಗಿತ್ತು.

ADVERTISEMENT

ಆರ್‌ಎಸ್‌ಎಸ್‌ ಕಚೇರಿಯ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಭಾಷಣ ಮಾಡಿದ್ದ ಪ್ರಣವ್‌ ಮುಖರ್ಜಿ, ‘ಸರ್ಕಾರ ರಾಜಧರ್ಮ ಪಾಲಿಸಬೇಕು’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.