ADVERTISEMENT

ಪ್ರಧಾನಿ ಮೋದಿಯವರ ಸುದೀರ್ಘ ಭಾಷಣಕ್ಕೆ ಟ್ವೀಟ್ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2016, 10:14 IST
Last Updated 15 ಆಗಸ್ಟ್ 2016, 10:14 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: 70 ನೇ ಸ್ವಾತಂತ್ರ್ಯದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದರು. 1 ಗಂಟೆ 8 ನಿಮಿಷ 43 ಸೆಕೆಂಡ್‍ಗಳ ಕಾಲ ಭಾಷಣ ಮಾಡಿದ್ದ  ನರೇಂದ್ರ ಮೋದಿಯವರು ಆ ಭಾಷಣದಲ್ಲಿ ಏನೆಲ್ಲಾ ವಿಷಯ ಹೇಳಿದ್ದರು ಎಂಬುದು ಸುದ್ದಿಯಾದರೆ, ಭಾಷಣದ ಬಗ್ಗೆ ಸಾಮಾಜಿಕ ತಾಣವಾದ ಟ್ವಿಟರ್‍ ನಲ್ಲಿ ತರಹೇವಾರಿ ಟ್ವೀಟ್ ವಿಮರ್ಶೆಗಳು ಹರಿದಾಡುತ್ತಿವೆ.

ಪ್ರಧಾನಿ ಮೋದಿಯವರ ಈ ಭಾಷಣ ಮನಮೋಹನ್ ಸಿಂಗ್ ಅವರಿಗೇ ನಿದ್ದೆ ಬರುವಂತೆ ಮಾಡಿತು ಎಂಬ ಟ್ವೀಟ್‍ನಿಂದ ಹಿಡಿದು, ಇದು ಪಂಜಾಬ್ ಅಥವಾ ಉತ್ತರ ಪ್ರದೇಶದ ಚುನಾವಣಾ ರ‍್ಯಾಲಿ ಅಲ್ಲ ಎಂಬುದನ್ನು ಯಾರಾದರೂ ಮೋದಿಗೆ ನೆನಪಿಸಿ ಎಂದು ನೆಟಿಜನ್‍ಗಳು ಟ್ವೀಟ್ ಮಾಡಿದ್ದಾರೆ.

ಇಲ್ಲಿವರೆಗೆ ಮೋದಿ ಮಾಡಿದ ಭಾಷಣಗಳಲ್ಲಿ ದುರ್ಬಲವಾದ ಭಾಷಣವಿದು, ಅವರ ಮೌನವೇ ಹೆಚ್ಚು ಸದ್ದು ಮಾಡುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.