ADVERTISEMENT

ಫ್ರಾನ್ಸ್‌ ಕಂಪನಿ ಜೊತೆ ಒಪ್ಪಂದ

ಘನ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 19:58 IST
Last Updated 10 ಮಾರ್ಚ್ 2018, 19:58 IST
ಫ್ರಾನ್ಸ್‌ ಕಂಪನಿ ಜೊತೆ ಒಪ್ಪಂದ
ಫ್ರಾನ್ಸ್‌ ಕಂಪನಿ ಜೊತೆ ಒಪ್ಪಂದ   

ನವದೆಹಲಿ: ಆನೇಕಲ್‌ ತಾಲ್ಲೂಕಿನ ಚಿಕ್ಕನಾಗಮಂಗಲ ಬಳಿ ಘನತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಘಟಕ ಸ್ಥಾಪಿಸುವ ನಿಟ್ಟಿನಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಶನಿವಾರ ಇಲ್ಲಿ ಫ್ರಾನ್ಸ್‌ ಮೂಲದ 3ವೇಸ್ಟ್‌ ಸ್ಯಾಸ್‌ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿತು.

ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರಾನ್‌ ಅವರೊಂದಿಗೆ ಭಾರತಕ್ಕೆ ಭೇಟಿ ನೀಡಿರುವ ಫ್ರಾನ್ಸ್‌ನ ವಿದೇಶಾಂಗ ಸಚಿವ ಜೀನ್‌ ಯೇಸ್ ಲೀ ಡ್ರೇನ್‌ ಅವರ ಸಮ್ಮುಖದಲ್ಲಿ ಇಲ್ಲಿನ ಪಂಚತಾರಾ ಹೋಟೆಲ್‌ನಲ್ಲಿ ಸಂಜೆ ನಡೆದ ಕಾರ್ಯಕ್ರಮದಲ್ಲಿ, 3ವೇಸ್ಟ್‌ ಸ್ಯಾಸ್‌ ಕಂಪನಿ ಜೊತೆ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ಹಾಗೂ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಓ) ರಾಬರ್ಟ್‌ ಫಿಲಿಪ್‌ ಸಹಿ ಹಾಕಿದರು.

ಒಪ್ಪಂದದ ಪ್ರಕಾರ ಅಂದಾಜು₹ 2,500 ಕೋಟಿ ವೆಚ್ಚದ ಘಟಕವನ್ನು 3 ವೇಸ್ಟ್‌ ಸ್ಯಾಸ್‌ ಕಂಪನಿಯೇ ಸ್ಥಾಪಿಸಲಿದ್ದು, ಬಿಬಿಎಂಪಿ ಹಣಕಾಸಿನ ನೆರವು ನೀಡುವುದಿಲ್ಲ. ಆದರೆ, ವಿದ್ಯುತ್‌ ಉತ್ಪಾದನೆಗಾಗಿ ನಿತ್ಯವೂ ಅಂದಾಜು 500 ಟನ್‌ ಘನ ತ್ಯಾಜ್ಯವನ್ನು ಕಂಪನಿಗೆ ಪೂರೈಸುವ ಹೊಣೆಗಾರಿಕೆ ಹೊಂದಲಿದೆ. ಅಲ್ಲದೆ, ವಿದ್ಯುತ್‌ ಉತ್ಪಾದಿಸುವ ಹಕ್ಕುಸ್ವಾಮ್ಯವನ್ನು ಕಂಪನಿಯೇ ಹೊಂದಲಿದೆ.

ADVERTISEMENT

ತಕ್ಷಣದಿಂದಲೇ ಘಟಕ ನಿರ್ಮಾಣದ ಕಾಮಗಾರಿ ಆರಂಭಿಸಲು ಕಂಪನಿಯು ಒಪ್ಪಿಗೆ ಸೂಚಿಸಿದ್ದು, ಮುಂದಿನ ಏಳು ತಿಂಗಳೊಳಗೆ ವಿದ್ಯುತ್‌ ಉತ್ಪಾದನೆ ಆರಂಭಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.