ADVERTISEMENT

ಬಚ್ಚ ಶವಪರೀಕ್ಷೆ ಮಾಡಿದ ವೈದ್ಯ ಚುನಾವಣೆಗೆ!

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 11:25 IST
Last Updated 21 ಮಾರ್ಚ್ 2011, 11:25 IST

ಚೆನ್ನೈ (ಪಿಟಿಐ): 2 ಜಿ ಸ್ಪೆಕ್ಟ್ರಂ ಹಗರಣದಲ್ಲಿ ಸಿಬಿಐ ತನಿಖೆಗೆ ಒಳಗಾಗಿರುವ ದೂರ ಸಂಪರ್ಕ ಇಲಾಖೆ ಮಾಜಿ ಸಚಿವ ಎ. ರಾಜಾ ಅವರ ನಿಕಟವರ್ತಿಯಾಗಿದ್ದ ಸಾದಿಕ್ ಬಚ್ಚ ಶವ ಪರೀಕ್ಷೆ ನಡೆಸಿದ್ದ ವ್ಯೆದ್ಯ ಡಾ. ವಿ.ಡೇಕಲ್ ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿ ಚುನಾವಣೆಗೆ ಧುಮುಕಲಿದ್ದಾರೆ.

ಏಪ್ರಿಲ್ 13 ರಂದು ತಮಿಳುನಾಡು ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಡೇಕಲ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. 

‘ನಾನು ಸ್ವತಂತ್ರ್ಯ ಅಭ್ಯರ್ಥಿಯಾಗಿ ಚುನಾವಣೆಗೆ  ಸ್ಪರ್ಧಿಸ ಬಯಸಿದ್ದೇನೆ. ಅದಕ್ಕಾಗಿ ನಾನು ನನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದೇನೆ.ನನ್ನ ರಾಜೀನಾಮೆ ಇನ್ನೂ ಅಂಗೀಕಾರವಾಗಬೇಕಿದೆ. ಈ ರಾಜೀನಾಮೆಗೂ  ಮತ್ತು ಸಾದಿಕ್ ಬಚ್ಚ ಪ್ರಕರಣಕ್ಕೂಯಾವುದೇ ಸಂಬಂಧವಿಲ್ಲ~ ಎಂದು ಡೇಕಲ್ ಹೇಳಿದ್ದಾರೆ.

ಸಾಧಿಕ್ ಬಚ್ಚ ಇತ್ತೀಚಿಗೆ ಅನುಮಾನಸ್ಪದ ರೀತಿಯಲ್ಲಿ ಮೃತರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.