ADVERTISEMENT

ಬಟ್ಟೆ ಗಿರಣಿಯಲ್ಲಿ ಬೆಂಕಿ: ನಾಲ್ವರ ಸಾವು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 5:30 IST
Last Updated 22 ಸೆಪ್ಟೆಂಬರ್ 2011, 5:30 IST

ಮುಂಬೈ, (ಪಿಟಿಐ): ಠಾಣೆ ಜಿಲ್ಲೆಯ ನೆರೆಯಲ್ಲಿನ ದೊಂಬಿವಲಿಯಲ್ಲಿನ ಬಟ್ಟೆ ಗಿರಣಿಯೊಂದಕ್ಕೆ ಬೆಂಕಿ ಬಿದ್ದು ನಾಲ್ವರು ಗಿರಣಿ ಕಾರ್ಮಿಕರು ಮೃತರಾದ ದಾರುಣ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.

ದೊಂಬಿವಲಿಯ  ಕೈಗಾರಿಕಾ ಪ್ರದೇಶದಲ್ಲಿರುವ ಪೂಜಾ ಫ್ಯಾಬ್ರಿಕ್ಸ್ ಬಟ್ಟೆ ಗಿರಣಿಯಲ್ಲಿ ಗುರುವಾರ ನಸುಕಿನ 3.30 ರಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದ ದಳದ ಸಿಬ್ಬಂದಿ ಬೆಂಕಿಯಲ್ಲಿ ಸಿಲುಕಿಕೊಂಡಿದ್ದ 18 ಜನ ಗಿರಣಿ ಕಾರ್ಮಿಕರನ್ನು ರಕ್ಷಿಸಿದ್ದಾರೆ. ಐದು ಅಗ್ನಿಶಾಮಕ ದಳದ ನೀರಿನ ಟ್ಯಾಂಕರ್ ಗಳು ಬೆಂಕಿಯನ್ನು ನಂದಿಸುವಲ್ಲಿ ಶ್ರಮಿಸುತ್ತಿವೆ.

ADVERTISEMENT

ತಾಂತ್ರಿಕ ಕಾರಣದಿಂದ ಈ ಬಟ್ಟೆ ಗಿರಣಿಯಲ್ಲಿ ಬೆಂಕಿ ಕಾಣಿಸಿಕೊಂಡಿರಬೇಕೆಂದು ಶಂಕಿಸಲಾಗಿದೆ. ಬೆಂಕಿಯಲ್ಲಿ ಮೃತಪಟ್ಟವರು ಗುರುತು ಇನ್ನೂ ಪತ್ತೆಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.