ADVERTISEMENT

ಬಹುಭಾಷಾ ನಟಿ ಜ್ಯೋತಿಲಕ್ಷ್ಮಿ ನಿಧನ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2016, 19:52 IST
Last Updated 9 ಆಗಸ್ಟ್ 2016, 19:52 IST
ಜ್ಯೋತಿಲಕ್ಷ್ಮಿ
ಜ್ಯೋತಿಲಕ್ಷ್ಮಿ   

ಚೆನ್ನೈ (ಪಿಟಿಐ): ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದ ಹಿರಿಯ  ನಟಿ ಜ್ಯೋತಿಲಕ್ಷ್ಮಿ    (63) ಸೋಮವಾರ ತಡ ರಾತ್ರಿ  ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.   ಅವರು ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಸೇರಿದಂತೆ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. 70 ಮತ್ತು 80ರ ದಶಕದಲ್ಲಿ  ಜ್ಯೋತಿಲಕ್ಷ್ಮಿ ನಾಯಕಿಯಾಗಿ ಹಾಗೂ ಕ್ಯಾಬರೆ ಡ್ಯಾನ್ಸರ್‌  ಆಗಿ ಜನಪ್ರಿಯವಾಗಿದ್ದರು.

ದ್ವಾರಕೀಶ್‌ ಅಭಿನಯದ ‘ಕುಳ್ಳ ಏಜೆಂಟ್ 000’ ‘ಬೆಂಗಳೂರು ಮೇಲ್‌’ ಮತ್ತು ‘ರಕ್ತಕಣ್ಣೀರು’ ಸೇರಿದಂತೆ ಹಲವು ಚಿತ್ರಗಳಲ್ಲಿ ಜ್ಯೋತಿಲಕ್ಷ್ಮಿ ನಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.