ನವದೆಹಲಿ (ಐಎಎನ್‌ಎಸ್): ಬಾಂಗ್ಲಾದೇಶದೊಂದಿಗೆ ರೈಲು ಸಂಪರ್ಕ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ತ್ರಿಪುರ ರಾಜ್ಯದ ಅಗರ್ತಲಾ ಮತ್ತು ಬಾಂಗ್ಲಾದೇಶದ ಅಖೌರ ಮಧ್ಯೆ ಸಂಪರ್ಕ ಕಲ್ಪಿಸಲು ಯೋಜನೆ ಕೈಗೊತ್ತಿಕೊಳ್ಳುವುದಾಗಿ ರೈಲ್ವೆ ಸಚಿವರು ಬಜೆಟ್‌ನಲ್ಲಿ ಭರವಸೆ ನೀಡಿದ್ದಾರೆ.
ಇದರಿಂದ ಉಭಯ ದೇಶಗಳ ಸಂಬಂಧ ಸುಧಾರಿಸುವುದು ಮಾತ್ರವಲ್ಲದೆ, ಕೋಲ್ಕತ್ತದಿಂದ ತ್ರಿಪುರಕ್ಕೆ ಬಾಂಗ್ಲಾದೇಶ ಮಾರ್ಗವಾಗಿ ಸಂಪರ್ಕ ಕಲ್ಪಿಸಿದರೆ ಈಶಾನ್ಯ ರಾಜ್ಯಗಳ ಪ್ರದೇಶಗಳಿಗೆ ದೂರ ಮತ್ತು ಪ್ರಯಾಣದ ಅವಧಿ ಕಡಿಮೆ ಆಗುತ್ತದೆ. 2011-12ನೇ ಸಾಲಿನ ಬಜೆಟ್‌ನಲ್ಲಿ ನೇಪಾಳದೊಂದಿಗೆ ಸಂಪರ್ಕ ಕಲ್ಪಿಸುವ ಎರಡು ಯೋಜನೆಗಳನ್ನು ರೈಲ್ವೆ ಇಲಾಖೆ ಕೈಗೆತ್ತಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.