ADVERTISEMENT

ಬಾಲಕಿ ಹೊಟ್ಟೆಯಲ್ಲಿ 2.8 ಕೆ.ಜಿ ಗಡ್ಡೆ ಪತ್ತೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST

ಮುಂಬೈ(ಐಎಎನ್‌ಎಸ್): 14 ವರ್ಷದ ಬಾಲಕಿಯ ಹೊಟ್ಟೆಯಲ್ಲಿ 2.8 ಕೆ.ಜಿ ಭಾರದ, ಅಪಾಯಕಾರಿಯಲ್ಲದ ಗಡ್ಡೆಯನ್ನು ಹಾಗೂ 300 ಮಿ.ಲೀ ನಷ್ಟು ದ್ರವವನ್ನು ಶಸ್ತ್ರಕ್ರಿಯೆ ಮೂಲಕ ಯಶಸ್ವಿಯಾಗಿ ತೆಗೆಯಲಾಗಿದೆ.

ನಗರಸಭೆ ಆಸ್ಪತ್ರೆಯಲ್ಲಿ ಕಳೆದ ವಾರ ಈ ಅಂಡಾಶಯ ಶಸ್ತ್ರಕ್ರಿಯೆ ನಡೆಸಲಾಗಿದ್ದು ಬಾಲಕಿ ಸಾನಾ ಎಸ್. ಶೇಕ್ ತೀವ್ರ ಬೆನ್ನು ನೋವು ಹಾಗೂ ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿದ್ದಳೆಂದು ಎಲ್‌ಟಿಎಮ್‌ಜಿ ಸಿಯಾನ್ ಆಸ್ಪತ್ರೆಯಲ್ಲಿ ಶಸ್ತ್ರಕ್ರಿಯೆ ನಡೆಸಿದ ನಿರಂಜನ ಚೌಹಾಣ್ ತಿಳಿಸಿದ್ದಾರೆ.

ಸಾನಾ ಹೊಟ್ಟೆಯಲ್ಲಿದ್ದ ಈ ಅಪಾಯಕಾರಿಯಲ್ಲದ ಗಡ್ಡೆ 1.5 ಅಡಿ ಉದ್ದವಿತ್ತು. 38 ವಾರಗಳ ಮಗುವಿನ ಗಾತ್ರದಷ್ಟಿತ್ತು. ಈಗ ಆಕೆ ಯಾವುದೇ ಸಮಸ್ಯೆ ಎದುರಿಸದೆ ಚೇತರಿಸಿಕೊಳ್ಳುತ್ತಿದ್ದಾಳೆ. ಋತು ಚಕ್ರಕ್ಕಿಂತ ಮೊದಲು ಈ ಸಮಸ್ಯೆ ಕಾಣಿಸಿಕೊಳ್ಳುವುದು ಅತ್ಯಂತ ಕಡಿಮೆ. ಜಗತ್ತಿನಲ್ಲಿ ಕೇವಲ ಒಂಬತ್ತು ಇಂಥ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಶಸ್ತ್ರಕ್ರಿಯೆಯ ಮೂಲಕ ತೆಗೆಯಲಾದ ಅತಿದೊಡ್ಡ ಗಡ್ಡೆ ಇದಾಗಿದೆ. ಮತ್ತು ಭಾರತದಲ್ಲಿ ದಾಖಲಾಗಿರುವ ಮೊದಲನೆಯ ಪ್ರಕರಣ ಇದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.