ADVERTISEMENT

ಬಿಎಸ್ಎನ್ಎಲ್-ವೈಮ್ಯಾಕ್ಸ್ ಒಪ್ಪಂದ: ದೇಶಾದ್ಯಂತ ಸಿಬಿಐ ದಾಳಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 18:30 IST
Last Updated 24 ಫೆಬ್ರುವರಿ 2012, 18:30 IST

ನವದೆಹಲಿ (ಪಿಟಿಐ): ಟೆಲಿಕಾಂ ಹಗರಣಗಳು ಸಾಲು ಸಾಲು ಬೆಳಕಿಗೆ ಬರುತ್ತಿರುವ ಹೊತ್ತಿನಲ್ಲೆ ಮತ್ತೊಂದು ಹೊಸ ಪ್ರಕರಣವೊಂದನ್ನು ಸಿಬಿಐ ದಾಖಲಿಸಿಕೊಂಡಿದೆ.

ಈ ಬಾರಿ ಅದು ದಾಖಲಿಸಿಕೊಂಡಿರುವುದು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ವಿರುದ್ಧ ! ಹೌದು ಬಿಎಸ್‌ಎನ್‌ಎಲ್ - ವೈಮ್ಯಾಕ್ಸ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಅಕ್ರಮ ನಡೆದಿದೆ ಎಂದು ಸಿಬಿಐ ಪ್ರಕರಣ ದಾಖಲಿಸಿ ದೇಶದ ನಾನಾ ಕಡೆ ಬಿಎಸ್‌ಎನ್‌ಎಲ್ ಕಚೇರಿಗಳನ್ನು ಶನಿವಾರ ಜಾಲಾಡಿ ದಾಖಲೆಗಳನ್ನು ವಶಪಡಿಸಿಕೊಂಡಿತು.

ಆದರೆ ಈ ಹೊಸ ಪ್ರಕರಣದಲ್ಲಿ ಮಾಜಿ ಟೆಲಿಕಾಂ ಸಚಿವ ರಾಜಾ ಹೆಸರನ್ನು ಸಿಬಿಐ ಪ್ರಸ್ತಾಪಿಸಿಲ್ಲ. ಆದರೆ ಅವರಿಗೆ ನಿಕಟವಾದ ಖಾಸಗಿ ಕಂಪೆನಿ ಸ್ಟಾರ್ ನೆಟ್ ಕಮ್ಯೂನಿಕೇಷನ್ ಜೊತೆಗೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ದೆಹಲಿ, ಕೋಲ್ಕತ್ತ, ಚೆನ್ನೈ ಮತ್ತು ಗುಡಗಾಂವ್ ನಲ್ಲಿ ಸ್ಟಾರ್ ನೆಟ್ ಕಂಪೆನಿಯು ಬಿಎಸ್ಎನ್ಎಲ್ ವೈಮ್ಯಾಕ್ಸ್ ಹಂಚಿಕೆ ಗುತ್ತಿಗೆ ಪಡೆದಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಅರ್ಹತೆ ಇಲ್ಲದೇ ಇದ್ದರೂ ಸ್ಟಾರ್ ನೆಟ್ ಕಮ್ಯೂನಿಕೇಷನ್ ಸಂಸ್ಥೆಗೆ ಬಿಎಸ್ಎನ್ಎಲ್ ತನ್ನ ಆರು ವಲಯಗಳಲ್ಲಿ ವೈಮ್ಯಾಕ್ಸ್ ಹಂಚಿಕೆಯ ಅಧಿಕಾರ ಪತ್ರವನ್ನು ನೀಡಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT