ADVERTISEMENT

ಬಿಜೆಪಿ ಘಟಕ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 19:30 IST
Last Updated 7 ಏಪ್ರಿಲ್ 2012, 19:30 IST

ಲಖನೌ (ಪಿಟಿಐ): ಬಿಜೆಪಿ ರಾಜ್ಯಾಧ್ಯಕ್ಷ ಸೂರ್ಯ ಪ್ರತಾಪ್ ಶಾಹಿ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷದ ಜಿಲ್ಲೆ, ನಗರ ಮತ್ತು ವಿಭಾಗ ಮಟ್ಟದ ಘಟಕಗಳನ್ನು ಶನಿವಾರ ವಿಸರ್ಜಿಸಿದ್ದಾರೆ ಎಂದು ವಕ್ತಾರ ವಿಜಯ ಬಹಾದ್ದೂರ್ ಪಾಠಕ್ ತಿಳಿಸಿದ್ದಾರೆ.

ಈ ವಿಸರ್ಜನೆಗೆ ಕಾರಣಗಳನ್ನು ತಿಳಿಸಿಲ್ಲ. ಆದರೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ ಈ ಹಿಂದಿನ ಚುನಾವಣೆಯಲ್ಲಿ 51 ಸ್ಥಾನ ಪಡೆದಿದ್ದ ಪಕ್ಷ, ಈ ಬಾರಿ 47 ಸ್ಥಾನಗಳಲ್ಲಿ ಮಾತ್ರ ಜಯ ಕಂಡಿತ್ತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.