ADVERTISEMENT

ಬಿಜೆಪಿ ಶಾಸಕ ನ್ಯಾಯಾಂಗ ಬಂಧನ

ಪಿಟಿಐ
Published 14 ಏಪ್ರಿಲ್ 2018, 19:30 IST
Last Updated 14 ಏಪ್ರಿಲ್ 2018, 19:30 IST

ನವದೆಹಲಿ: ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಸಿಬಿಐ ಶನಿವಾರ ಶಶಿ ಸಿಂಗ್ ಎನ್ನುವ ಮಹಿಳೆಯನ್ನು ಬಂಧಿಸಿದೆ.

ಅಪರಾಧ ನಡೆದ ದಿನ ಸಂತ್ರಸ್ತೆಯನ್ನು ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಬಳಿ ಕರೆದುಕೊಂಡು ಹೋಗಿದ್ದು ಇದೇ ಮಹಿಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಸೆಂಗರ್‌ನನ್ನು ಲಖನೌದ ವಿಶೇಷ ನ್ಯಾಯಾಲಯ ಏಳು ದಿನ ಸಿಬಿಐ ವಶಕ್ಕೆ ಒಪ್ಪಿಸಿದೆ.

ADVERTISEMENT

ಸಂತ್ರಸ್ತೆಯ ತಾಯಿ ನೀಡಿದ್ದ ದೂರಿನಲ್ಲಿ, ‘ಶಶಿ ಸಿಂಗ್ ತನ್ನ ಮಗಳಿಗೆ ಆಮಿಷ ಒಡ್ಡಿ ಶಾಸಕನ ಮನೆಗೆ ಕರೆದೊಯ್ದಿದ್ದಳು. ಮಗಳ ಮೇಲೆ ಶಾಸಕ ಅತ್ಯಾಚಾರ ಎಸಗುವ ವೇಳೆ ಈಕೆ ಕೋಣೆಯ ಹೊರಗೆ ಕಾವಲು ನಿಂತಿದ್ದಳು’ ಎಂದು ಉಲ್ಲೇಖಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.