ADVERTISEMENT

ಬಿಜೆಪಿ ಸೇರುವುದಕ್ಕಾಗಿ ₹1 ಕೋಟಿ ಆಮಿಷ ಒಡ್ಡಲಾಗಿತ್ತು : ಪಟೇಲ್‌ ಸಮುದಾಯದ ಮುಖಂಡನ ಆರೋಪ

ಪಿಟಿಐ
Published 23 ಅಕ್ಟೋಬರ್ 2017, 12:01 IST
Last Updated 23 ಅಕ್ಟೋಬರ್ 2017, 12:01 IST
ಪಾಟೀದಾರ್‌ ಅನಾಮತ್‌ ಆಂದೋಲನ ಸಮಿತಿಯ (ಪಿಎಎಎಸ್‌) ಮುಖಂಡ ನರೇಂದ್ರ ಪಟೇಲ್‌
ಪಾಟೀದಾರ್‌ ಅನಾಮತ್‌ ಆಂದೋಲನ ಸಮಿತಿಯ (ಪಿಎಎಎಸ್‌) ಮುಖಂಡ ನರೇಂದ್ರ ಪಟೇಲ್‌   

ಅಹಮದಾಬಾದ್‌ : ಬಿಜೆಪಿಗೆ ಸೇರುವುದಕ್ಕಾಗಿ ತಮಗೆ ₹1 ಕೋಟಿ ಆಮಿಷ ಒಡ್ಡಲಾಗಿತ್ತು ಎಂದು ಹಾರ್ದಿಕ್‌ ಪಟೇಲ್‌ ನೇತೃತ್ವದ ಪಾಟೀದಾರ್‌ ಅನಾಮತ್‌ ಆಂದೋಲನ ಸಮಿತಿಯ (ಪಿಎಎಎಸ್‌) ಮುಖಂಡ ನರೇಂದ್ರ ಪಟೇಲ್‌ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ.

ನರೇಂದ್ರ ಅವರ ಆರೋಪದ ಬೆನ್ನಿಗೇ, ಪಿಎಎಎಸ್‌ನ ಇನ್ನೊಬ್ಬ ಮುಖಂಡ ಕೆಲವು ತಿಂಗಳ ಹಿಂದೆ ಬಿಜೆಪಿ ಸೇರಿದ್ದ ನಿಖಿಲ್‌ ಸಾವನಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಾಟೀದಾರ್‌ ಸಮುದಾಯದ ಬೇಡಿಕೆಗಳನ್ನು ಈಡೇರಿಸುವುದಾಗಿ ನೀಡಿದ್ದ ಭರವಸೆಯನ್ನು ಬಿಜೆಪಿ ಈಡೇರಿಸಿಲ್ಲ. ಹಾಗಾಗಿ ಪಕ್ಷ ಬಿಡುತ್ತಿರುವುದಾಗಿ ಸಾವನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT